SUDDILIVE || SHIVAMOGGA
ವಿದ್ಯಾನಗರದ ಸಲೂನ್ ಪಾರ್ಲರ್ ವೊಂದರ ಮೇಲೆ ಕೋಟೆ ಪೊಲೀಸರ ದಾಳಿ ಮಾಲೀಕನ ಬಂಧನ-Kote police raid Vidyanagar saloon parlaour, owner arrested
ಶಿವಮೊಗ್ಗ, ಜು.24: ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ವಿದ್ಯಾನಗರದಲ್ಲಿರುವ ಎವರ್‌ಗ್ರೀನ್ ಯುನಿಸೆಕ್ಸ್ ಪಾರ್ಲರ್ ಆ್ಯಂಡ್ ಸಲೂನ್ ಮೇಲೆ ಪೊಲೀಸರು ದಾಳಿ ನಡೆಸಿ, ಅಲ್ಲಿ ನಡೆಯುತ್ತಿದ್ದ ಆರೋಪಿತ ಅನೈತಿಕ ಚಟುವಟಿಕೆಯನ್ನು ಪತ್ತೆಹಚ್ಚಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೂರು ಮಂದಿ ಸಂತ್ರಸ್ತೆಯರನ್ನು ಸುರಕ್ಷಿತವಾಗಿ ರಕ್ಷಣೆ (Secured) ಮಾಡಲಾಗಿದೆ.
ಕೋಟೆ ಪಿಐ ಹರೀಶ್ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ದಾಳಿ ವೇಳೆ ಸಲೂನ್‌ನ ಮಾಲೀಕ ಆನಂದ್ ಕುಮಾರ್ ಅವರನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸಲೂನ್‌ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕೋಟೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಪೊಲೀಸರು ಸ್ಥಳದಿಂದ ಅಗತ್ಯ ದಾಖಲೆಗಳು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ರಕ್ಷಿಸಲ್ಪಟ್ಟ ಮೂವರು ಮಹಿಳೆಯರನ್ನು ಸೂಕ್ತ ಆರೈಕೆ ಮತ್ತು ಕಾನೂನು ಪ್ರಕ್ರಿಯೆಗಾಗಿ ಸಂಬಂಧಿತ ಅಧಿಕಾರಿಗಳ ವಶಕ್ಕೆ ಒಪ್ಪಿಸುವ ಸಾಧ್ಯತೆಯಿದೆ.
ಪ್ರಕರಣದ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
Kote police raid Vidyanagar saloon parlaour, owner arrested
