ಪತ್ತೆಯಾಗದ 24 ವಾಹನಗಳ ಬಹಿರಂಗ ಹರಾಜು-Public auction of 24 unaccounted for vehicles

SUDDILIVE || SHIVAMOGGA

ಪತ್ತೆಯಾಗದ 24 ವಾಹನಗಳ ಬಹಿರಂಗ ಹರಾಜು-Public auction of 24 unaccounted for vehicles

Vehicle, action


ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ವಾರಸುದಾರರು ಪತ್ತೆಯಾಗದ 24 ವಿವಿಧ ವಾಹನಗಳ ಬಹಿರಂಗ ಹರಾಜು ಜುಲೈ 4ರಂದು ನಡೆಯಲಿದೆ.

ಮಾನ್ಯ 4ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಭದ್ರಾವತಿ ಅವರ ಆದೇಶದಂತೆ ಈ ಹರಾಜು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಹರಾಜು ಜುಲೈ 4, 2026ರಂದು ಬೆಳಿಗ್ಗೆ 10.00 ಗಂಟೆಗೆ ನ್ಯೂಟೌನ್ ಪೊಲೀಸ್ ಠಾಣೆ ಆವರಣದಲ್ಲಿ ನಡೆಯಲಿದೆ.

ಈ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಕಟಣೆ ನೀಡಿದ್ದು, ವಾರಸುದಾರರು ಪತ್ತೆಯಾಗದ 24 ವಿವಿಧ ವಾಹನಗಳನ್ನು ಸಾರ್ವಜನಿಕ ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಹರಾಜಿನಲ್ಲಿ ಆಸಕ್ತ ಸಾರ್ವಜನಿಕರು ನಿಗದಿತ ದಿನಾಂಕ ಹಾಗೂ ಸಮಯಕ್ಕೆ ನ್ಯೂಟೌನ್ ಪೊಲೀಸ್ ಠಾಣೆ ಆವರಣಕ್ಕೆ ಆಗಮಿಸಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Public auction of 24 unaccounted for vehicles

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close