ಶಿವಮೊಗ್ಗದಲ್ಲಿ ಜುಲೈ 5ರಂದು 'ರನ್ ಮಲೆನಾಡು' ಮ್ಯಾರಥಾನ್- 'Run Malenadu' marathon to be held in Shimoga on July 5

SUDDILIVE || SHIVAMOGGA

ಶಿವಮೊಗ್ಗದಲ್ಲಿ ಜುಲೈ 5ರಂದು 'ರನ್ ಮಲೆನಾಡು' ಮ್ಯಾರಥಾನ್- 'Run Malenadu' marathon to be held in Shimoga on July 5   

Run, marathon

ಶಿವಮೊಗ್ಗ: ಪರಿಸರ ಸಂರಕ್ಷಣೆ ಹಾಗೂ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶ್ರೀಯುತ ಶರತ್ ಮರಿಯಪ್ಪ ಅವರ ನೇತೃತ್ವದಲ್ಲಿ ಜುಲೈ 5ರಂದು ಶಿವಮೊಗ್ಗದಲ್ಲಿ 'ರನ್ ಮಲೆನಾಡು' ರಸ್ತೆ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯು ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿದ್ದು, ವಿವಿಧ ವಯೋಮಾನದವರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಓಟ ನಡೆಸಲಾಗುತ್ತದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರತ್ ಮರಿಯಪ್ಪ, ಕಾರ್ಯಕ್ರಮವನ್ನ ಮಾಜಿ ಸಚಿವ ಮಧಯ ಬಂಗಾರಪ್ಪ ಮತ್ತು ಸಂತೋಷ್ ಲಾಡ್ ಉದ್ಘಾಟಿಸುವ ನಿರೀಕ್ಷೆಯಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಉಚಿತವಾಗಿ ಟಿ-ಶರ್ಟ್ ಹಾಗೂ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಮಳೆ ಕೊರತೆಯ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಭಾಗವಹಿಸುವ ಎಲ್ಲರಿಗೂ ಉಚಿತವಾಗಿ ಸಸಿಗಳನ್ನು ವಿತರಿಸಲಾಗುತ್ತದೆ ಎಂದರು. 

ವಿಶೇಷ ಚೇತನರು, ಅಂಧರು ಹಾಗೂ ಮೂಕಬಧಿರರಿಗಾಗಿ ಪ್ರತ್ಯೇಕವಾಗಿ ಹ್ಯೂಮನ್ ರನ್ ಆಯೋಜಿಸಲಾಗಿದ್ದು, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರೋತ್ಸಾಹ ನೀಡಲಾಗುತ್ತಿದೆ. ಬೆಳಿಗ್ಗೆ ವಾಕಿಂಗ್ ಮಾಡುವ ದಂಪತಿಗಳಿಗಾಗಿ ಕಪಲ್ಸ್ ರನ್ ಏರ್ಪಡಿಸಲಾಗಿದ್ದು, ವಿಜೇತರಿಗೆ ಆಕರ್ಷಕ ಮೊಮೆಂಟೋ ಹಾಗೂ ನಗದು ಬಹುಮಾನ ನೀಡಲಾಗುತ್ತದೆ.

ವಿವಿಧ ವಿಭಾಗಗಳು ಹಾಗೂ ಮಾರ್ಗ

16 ವರ್ಷದೊಳಗಿನ ಬಾಲಕ-ಬಾಲಕಿಯರಿಗೆ 3 ಕಿ.ಮೀ. ಓಟ ಆಯೋಜಿಸಲಾಗಿದೆ. ಮಾರ್ಗವು ನೆಹರೂ ಕ್ರೀಡಾಂಗಣ → ಉಷಾ ಸರ್ಕಲ್ → ಲಕ್ಷ್ಮಿ ಟಾಕೀಸ್ ಸರ್ಕಲ್ → ಜೈಲ್ ಸರ್ಕಲ್ → ವಾಪಸ್ ನೆಹರೂ ಕ್ರೀಡಾಂಗಣ ಆಗಿರುತ್ತದೆ. ಈ ವಿಭಾಗದಲ್ಲಿ ನಗದು ಬಹುಮಾನವೂ ಇರಲಿದೆ.

Run, marathon

ಪಿಯುಸಿಯಿಂದ ಮೇಲ್ಪಟ್ಟ 20 ವರ್ಷದೊಳಗಿನ ಕಾಲೇಜು ವಿದ್ಯಾರ್ಥಿಗಳಿಗೆ 5 ಕಿ.ಮೀ. ಓಟ ನಡೆಯಲಿದೆ. ಮಾರ್ಗವು ನೆಹರೂ ಕ್ರೀಡಾಂಗಣ → ಉಷಾ ನರ್ಸಿಂಗ್ ಹೋಮ್ → ಲಕ್ಷ್ಮಿ ಟಾಕೀಸ್ ಸರ್ಕಲ್ → ಪೊಲೀಸ್ ಚೌಕಿ → ಶುಭಮಂಗಳ ಕಲ್ಯಾಣ ಮಂಟಪದ ಎದುರು ಭಾಗ → ನಂದಿ ಪೆಟ್ರೋಲ್ ಬಂಕ್ → ಕುವೆಂಪು ರಸ್ತೆ → ಜೈಲ್ ಸರ್ಕಲ್ ಮುಖಾಂತರ ವಾಪಸ್ ನೆಹರೂ ಕ್ರೀಡಾಂಗಣ ಆಗಿರುತ್ತದೆ. ಈ ವಿಭಾಗದಲ್ಲಿ ಪ್ರಥಮ ಬಹುಮಾನ ₹5,000, ದ್ವಿತೀಯ ಬಹುಮಾನ ₹3,000 ಹಾಗೂ ತೃತೀಯ ಬಹುಮಾನ ₹2,000 ನೀಡಲಾಗುತ್ತದೆ.

ಕರ್ನಾಟಕದ ಎಲ್ಲಾ ಕ್ರೀಡಾಪಟುಗಳಿಗಾಗಿ ಓಪನ್ ಮೆನ್ ವಿಭಾಗದಲ್ಲಿ 10 ಕಿ.ಮೀ. ಓಟ ಆಯೋಜಿಸಲಾಗಿದೆ. ಇದರ ಮಾರ್ಗ ನೆಹರೂ ಕ್ರೀಡಾಂಗಣ → ಡಿ.ವಿ.ಎಸ್ ಸರ್ಕಲ್ → ವಾಪಸ್ ನೆಹರೂ ಕ್ರೀಡಾಂಗಣ ಸರ್ಕಲ್ → ಉಷಾ ನರ್ಸಿಂಗ್ ಹೋಮ್ → ಲಕ್ಷ್ಮಿ ಟಾಕೀಸ್ ಸರ್ಕಲ್ → ಪೊಲೀಸ್ ಚೌಕಿ → ಆಲ್ಕೊಳ ಸರ್ಕಲ್ → ಸರ್ಕಿಟ್ ಹೌಸ್ ಸರ್ಕಲ್ → ಕುವೆಂಪು ರಸ್ತೆ ಮುಖಾಂತರ ವಾಪಸ್ ನೆಹರೂ ಕ್ರೀಡಾಂಗಣ ಆಗಿದ್ದು, ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.

ಸಾರ್ವಜನಿಕರ ಓಪನ್ ವಿಭಾಗದಲ್ಲಿ 5 ಕಿ.ಮೀ. ಓಟ ನಡೆಯಲಿದ್ದು, ವಾಕಿಂಗ್ ಮಾಡುವವರು ಹಾಗೂ ಹಿರಿಯ ನಾಗರಿಕರು ಭಾಗವಹಿಸಬಹುದು. ಈ ವಿಭಾಗದ ಮಾರ್ಗವು ಕಾಲೇಜು ವಿದ್ಯಾರ್ಥಿಗಳ 5 ಕಿ.ಮೀ. ಮಾರ್ಗದಂತೆಯೇ ಇರಲಿದೆ. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.

ಈ ಕ್ರೀಡಾಕೂಟಕ್ಕೆ ಶಿವಮೊಗ್ಗ ಕ್ರೀಡಾ ಬಳಗ, ಅಥ್ಲೆಟಿಕ್ಸ್ ಅಸೋಸಿಯೇಷನ್ ಹಾಗೂ ಒಲಿಂಪಿಕ್ ಅಸೋಸಿಯೇಷನ್ ತಾಂತ್ರಿಕ ಹಾಗೂ ಸಾಂಸ್ಥಿಕ ಬೆಂಬಲ ನೀಡುತ್ತಿವೆ. ಜನರ ದೈಹಿಕ ಆರೋಗ್ಯವನ್ನು ಉತ್ತಮಗೊಳಿಸುವುದು, ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಮೊಬೈಲ್ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಮ್ಯಾರಥಾನ್ ಆಯೋಜಿಸಲಾಗಿದೆ.

'Run Malenadu' marathon to be held in Shimoga on July 5  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close