ಭಾರಿ ಗಾಳಿ ಮಳೆ ಹಿನ್ನೆಲೆ ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನಾದ್ಯಂತ ಮಂಗಳವಾರ ಶಾಲೆಗಳಿಗೆ ರಜೆ- Schools across Sagar and Thirthahalli taluks to remain closed on Tuesday due to heavy winds and rain

SUDDILIVE || SAGARA || SHIVAMOGGA

ಭಾರಿ ಗಾಳಿ ಮಳೆ ಹಿನ್ನೆಲೆ ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನಾದ್ಯಂತ ಮಂಗಳವಾರ ಶಾಲೆಗಳಿಗೆ ರಜೆ- Schools across Sagar and Thirthahalli taluks to remain closed on Tuesday due to heavy winds and rain   

Sagara, thirthahalli

ಸಾಗರ: ನಿರಂತರ ಗಾಳಿ ಮಳೆಯ ಹಿನ್ನೆಲೆಯಲ್ಲಿ ಸಾಗರ ಮತ್ತು ತೀರ್ಥಹಳ್ಳಿಯಲ್ಲಿ ತಾಲೂಕಿನ ಎಲ್ಲಾ ಅಂಗನವಾಡಿಗಳು, ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.  

ಜುಲೈ 7, 2026 (ಮಂಗಳವಾರ) ರಜೆ ಘೋಷಿಸಿರುವ ಸಾಗರ ತಾಲೂಕಿನ ತಹಶೀಲ್ದಾರ್ ಡಾ. ಪ್ರತಿಭಾ ಆದೇಶಿಸಿದ್ದಾರೆ. ಆದರೆ ಪಿಯು, ಪದವಿ ಹಾಗೂ ಡಿಪ್ಲೊಮಾ ಕಾಲೇಜುಗಳಿಗೆ ಈ ರಜೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತೀರ್ಥಹಳ್ಳಿ ತಾಲೂಕಿನಾದ್ಯಂತ ಮಳೆ ಹಿನ್ನೆಲೆ ರಜೆ ಘೋಷಣೆ

ತೀರ್ಥಹಳ್ಳಿ: ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳು, ಮಿಡ್ಲ್ ಸ್ಕೂಲ್, ಪ್ರೌಢ ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ಜುಲೈ 7, 2026 (ಮಂಗಳವಾರ) ರಂದು ರಜೆ ಘೋಷಿಸಲಾಗಿದೆ.

ತಾಲೂಕಿನ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಆದೇಶವನ್ನು ತಹಶೀಲ್ದಾರ್ ಹೊರಡಿಸಿದ್ದು, ಸಂಬಂಧಿಸಿದ ಎಲ್ಲಾ ಶಿಕ್ಷಣ ಸಂಸ್ಥೆಗಳು ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

Schools across Sagar and Thirthahalli taluks to remain closed on Tuesday due to heavy winds and rain

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close