ದಾಳಿ ಪ್ರತಿದಾಳಿ ಎರಡು ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್-Separate FIRs filed in two police stations for counter-attack

 SUDDILIVE || SHIVAMOGGA

ದಾಳಿ ಪ್ರತಿದಾಳಿ ಎರಡು ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್-Separate FIRs filed in two police stations for counter-attack    

Fir, police

ಶಿವಮೊಗ್ಗ: ನಗರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ದಾಳಿ–ಪ್ರತಿದಾಳಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ ಪ್ರತ್ಯೇಕ ಸುಮೋಟೋ ಪ್ರಕರಣಗಳನ್ನು ದಾಖಲಿಸಿದ್ದಾರೆ. ಬಿಜೆಪಿ ಕಚೇರಿಯ ಮೇಲಿನ ದಾಳಿ ಪ್ರಕರಣವನ್ನು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಹಾಗೂ ಕಾಂಗ್ರೆಸ್ ಕಚೇರಿಯ ಮೇಲಿನ ದಾಳಿ ಪ್ರಕರಣವನ್ನು ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ನಗರದಲ್ಲಿ ರಾಜಕೀಯ ಉದ್ವಿಗ್ನತೆ ಸೃಷ್ಟಿಸಿದ ಈ ಘಟನೆಯಲ್ಲಿ ಸಾರ್ವಜನಿಕ ಶಾಂತಿಭಂಗ, ಗುಂಪು ಸೇರಿ ಗಲಭೆ ನಡೆಸುವುದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವುದು ಹಾಗೂ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳಡಿ ಬಿಎನ್‌ಎಸ್–2023ರ ಕಲಂ 189(2), 191(2), 132, 324(4) ಹಾಗೂ 190 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ಕಚೇರಿ ದಾಳಿ: ಕಾಂಗ್ರೆಸ್ ಮುಖಂಡರು ಸೇರಿ 35–40 ಜನರ ವಿರುದ್ಧ ಕೇಸ್

ಶಿವಮೊಗ್ಗ ನಗರದ ದೀನದಯಾಳ್ ರಸ್ತೆಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೊಡ್ಡಪೇಟೆ ಠಾಣೆಯ ಪಿಎಸ್ಐ ಮಂಜುನಾಥ್ ಎನ್.ಕೆ. ನೀಡಿದ ದೂರಿನ ಮೇರೆಗೆ ಕಾಂಗ್ರೆಸ್ ಮುಖಂಡರಾದ ಗಿರೀಶ್, ರಂಗನಾಥ್, ಶರತ್ ಮರಿಯಪ್ಪ ಹಾಗೂ ಕಾರ್ಯಕರ್ತರಾದ ಸಲ್ಮಾನ್, ಪಾಲಾಕ್ಷ, ವಿನಯ್ ತಾಂಡ್ಲೆ ಸೇರಿದಂತೆ ಸುಮಾರು 35 ರಿಂದ 40 ಜನರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರ ಪ್ರಕಾರ, ಗುಂಪು ಸೇರಿ ಗಲಭೆ ನಡೆಸುವುದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡುವುದು ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಸಿಬ್ಬಂದಿಗೆ ಅಡ್ಡಿಪಡಿಸಿದ ಆರೋಪಗಳನ್ನು ದಾಖಲಿಸಲಾಗಿದೆ.

ಕಾಂಗ್ರೆಸ್ ಕಚೇರಿ ದಾಳಿ: ಬಿಜೆಪಿ ಮುಖಂಡರು ಸೇರಿ 15–20 ಜನರ ವಿರುದ್ಧ ಪ್ರಕರಣ

ಇನ್ನೊಂದೆಡೆ, ಶಿವಮೊಗ್ಗ ನಗರದ ಇಂದಿರಾಗಾಂಧಿ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ನುಗ್ಗಿ ಮೊಟ್ಟೆ ತೂರಾಟ ನಡೆಸುವುದು ಹಾಗೂ ಕಚೇರಿ ಎದುರಿನ ಫ್ಲೆಕ್ಸ್ ಹರಿದು ಹಾಕಿದ ಆರೋಪದ ಹಿನ್ನೆಲೆಯಲ್ಲಿ ಜಯನಗರ ಪೊಲೀಸ್ ಠಾಣೆಯಲ್ಲೂ ಸುಮೋಟೋ ಪ್ರಕರಣ ದಾಖಲಾಗಿದೆ.

ಜಯನಗರ ಠಾಣೆಯ ಪಿಎಸ್ಐ ಕೆ.ಎನ್. ಹಳ್ಳಿ ನೀಡಿದ ದೂರಿನ ಮೇರೆಗೆ ಬಿಜೆಪಿ ಮುಖಂಡರಾದ ರಾಹುಲ್ ಬಿದರೆ, ವಿಜಯಾ ಭಟ್, ಮಿಳ್ಳಘಟ್ಟ ಜಗ್ಗ, ಯುವರಾಜ್, ಸಂತೋಷ್ ಹೊಳಲೂರು ಹಾಗೂ ದೀನ ದಯಾಳ್ ಸೇರಿದಂತೆ ಸುಮಾರು 15 ರಿಂದ 20 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣದಲ್ಲಿಯೂ ಸಾರ್ವಜನಿಕ ಶಾಂತಿಭಂಗ, ಗುಂಪು ಸೇರಿ ಗಲಭೆ ನಡೆಸುವುದು, ಸಾರ್ವಜನಿಕ ಆಸ್ತಿಗೆ ಹಾನಿ ಹಾಗೂ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳಡಿ ಬಿಎನ್‌ಎಸ್–2023ರ ಕಲಂ 189(2), 191(2), 132, 324(4) ಹಾಗೂ 190 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

Separate FIRs filed in two police stations for counter-attack


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close