ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ :ಶೇ.99.90ರಷ್ಟು ಅರ್ಜಿ ವಿತರಣೆ-Special comprehensive revision of the district's voter list: 99.90% applications distributed

SUDDILIVE || SHIVAMOGGA

ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ :ಶೇ.99.90ರಷ್ಟು ಅರ್ಜಿ ವಿತರಣೆ-Special comprehensive revision of the district's voter list: 99.90% applications distributed

Voter, list

ಶಿವಮೊಗ್ಗ, ಜು, 17(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐ ಆರ್) ಕಾರ್ಯವು ಸಾಗುತ್ತಿದ್ದು, ಜುಲೈ 17 ರ ಸಂಜೆ 4 ಗಂಟೆಯ ವೇಳೆಗೆ ಜಿಲ್ಲೆಯಾದ್ಯಂತ ಒಟ್ಟು ಶೇ.99.90 ರಷ್ಟು ಇ-ಫಾರ್ಮ್‌ಗಳನ್ನು (EFs) ವಿತರಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.

     ಜಿಲ್ಲೆಯ ಒಟ್ಟು 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1,793 ಬಿ.ಎಲ್.ಒ ಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 15,19,459 ಮತದಾರರಿದ್ದಾರೆ. ಈ ಪೈಕಿ ಇದುವರೆಗೆ 1517930 ಇ-ಫಾರ್ಮ್‌ಗಳನ್ನು ಅಂದರೆ ಶೇ. 99.90

ವಿತರಿಸಲಾಗಿದ್ದು, 1006399  ಫಾರ್ಮ್‌ಗಳನ್ನು  ಶೇ.66.23 ಡಿಜಿಟಲೀಕರಣಗೊಳಿಸಲಾಗಿದೆ.

ಕ್ಷೇತ್ರವಾರು ಪ್ರಗತಿ ವಿವರಗಳು:

ಶಿವಮೊಗ್ಗ ಗ್ರಾಮಾಂತರ: ಒಟ್ಟು 2,20,250 ಮತದಾರರಿದ್ದು, 2,20,250 ಶೇ. 100 ಇ-ಫಾರ್ಮ್ ವಿತರಿಸಲಾಗಿದೆ. 158001 ಅಂದರೆ ಶೇ. 71.74 ಡಿಜಿಟಲೀಕರಣಗೊಳಿಸಲಾಗಿದೆ.

ಭದ್ರಾವತಿ: 2,14,907 ಮತದಾರರಿದ್ದು, 2,14,907 ಶೇ. 100  ಇ-ಫಾರ್ಮ್ ವಿತರಿಸಲಾಗಿದ್ದು, 110420 ಫಾರ್ಮ್ ಅಂದರೆ ಶೇ 4.12 ಡಿಜಿಟಲೀಕರಣಗೊಂಡಿದೆ.

ಶಿವಮೊಗ್ಗ ನಗರ: 2,77,098 ಮತದಾರರನ್ನು ಹೊಂದಿದ್ದು, 275778  ಶೇ. 99.52  ಇ-ಫಾರ್ಮ್ ವಿತರಣೆಯಾಗಿದೆ. 144251 ಫಾರ್ಮ್ ಶೇ.52.06ಡಿಜಿಟಲೀಕರಣಗೊಂಡಿದೆ.

ತೀರ್ಥಹಳ್ಳಿ: 1,92,314 ಮತದಾರರಿದ್ದು, 192113 ಶೇ. 99.90 ಇ-ಫಾರ್ಮ್ ವಿತರಿಸಲಾಗಿದೆ. 140863  ಫಾರ್ಮ್ ಶೇ. 73.25 ಡಿಜಿಟಲೀಕರಣಗೊಂಡಿದೆ.

ಶಿಕಾರಿಪುರ 2,06,415 ಮತದಾರರಿದ್ದು,2,06,415 ಶೇ. 100 ಇ-ಫಾರ್ಮ್ ವಿತರಿಸಲಾಗಿದ್ದು, 142558 ಫಾರ್ಮ್ ಶೇ. 69.06 ಡಿಜಿಟಲೀಕರಣಗೊಳಿಸಲಾಗಿದೆ.

ಸೊರಬ: 1,98,955 ಮತದಾರರಿದ್ದು, 1,98,955 ಶೇ. 100 ರಷ್ಟು ಇ-ಫಾರ್ಮ್ ವಿತರಣೆಯಾಗಿದ್ದು. ಇಲ್ಲಿ 153176 ಫಾರ್ಮ್ ಶೇ. 76.99 ಡಿಜಿಟಲೈಸ್ ಮಾಡಲಾಗಿದೆ.

ಸಾಗರ: 2,09,520 ಮತದಾರರಿದ್ದು,2,09,520 ಶೇ. 100 ಇ-ಫಾರ್ಮ್ ವಿತರಿಸಲಾಗಿದ್ದು, 157130 ಫಾರ್ಮ್ ಶೇ.75  ಡಿಜಿಟಲೀಕರಣಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Special comprehensive revision of the district's voter list: 99.90% applications distributed

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close