ಶಿವಮೊಗ್ಗದಲ್ಲಿ ಜು. 25 ಮತ್ತು 26ರಂದು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ- Special voter list revision campaign in Shivamogga on July 25th and 26th

 SUDDILIVE || SHIVAMOGGA

ಶಿವಮೊಗ್ಗದಲ್ಲಿ ಜು. 25 ಮತ್ತು 26ರಂದು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ-  Special voter list revision campaign in Shivamogga on July 25th and 26th  

Voter, list

ಶಿವಮೊಗ್ಗ, ಜು. 23: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 113-ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR-2026) ಅಂಗವಾಗಿ ಜುಲೈ 25 ಹಾಗೂ 26ರಂದು "ವಿಶೇಷ ಪ್ರಚಾರ ದಿನ" (Special Campaign Day) ಆಯೋಜಿಸಲಾಗಿದೆ. ಈ ಕುರಿತು ಮಹಾನಗರ ಪಾಲಿಕೆ ಪ್ರಕಟಣೆ ಹೊರಡಿಸಿದೆ.

ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ನಡೆಯುವ ಈ ವಿಶೇಷ ಅಭಿಯಾನದಲ್ಲಿ ಮತದಾರರು ತಮ್ಮ ಮತದಾರರ ಪಟ್ಟಿಯ ವಿವರಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದು.

ಶಿವಮೊಗ್ಗ ಮಹಾನಗರ ಪಾಲಿಕೆ ಆವರಣ, ಗಾಂಧಿ ಪಾರ್ಕ್ ಎದುರು, ಶಿವಮೊಗ್ಗದಲ್ಲಿ ಈ ವಿಶೇಷ ಶಿಬಿರ ನಡೆಯಲಿದೆ.

ಮತದಾರರು ಮನೆ ಸಂಖ್ಯೆ, ವಿಳಾಸ, ಭಾವಚಿತ್ರ ಹಾಗೂ ಇತರೆ ವಿವರಗಳ ತಿದ್ದುಪಡಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು. ಅಲ್ಲದೆ, ಭರ್ತಿ ಮಾಡಿದ ಅರ್ಜಿಗಳನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಅಥವಾ ನಿಗದಿತ ಕೇಂದ್ರದಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಮತದಾರರು ಈ ವಿಶೇಷ ಪ್ರಚಾರ ದಿನದ ಸದುಪಯೋಗ ಪಡೆದು ತಮ್ಮ ಮತದಾರರ ವಿವರಗಳನ್ನು ಪರಿಶೀಲಿಸಿ, ಯಾವುದೇ ದೋಷಗಳಿದ್ದರೆ ಸರಿಪಡಿಸಿಕೊಳ್ಳುವಂತೆ ಪಾಲಿಕೆ ಆಯುಕ್ತ ಮಾಯಣ್ಣಗೌಡ ಮನವಿ ಮಾಡಿದ್ದಾರೆ.

Special voter list revision campaign in Shivamogga on July 25th and 26th  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close