SUDDILIVE || ANANDAPURA
ಆಚಾಪುರದಲ್ಲಿ ಕಳವಾಗಿದ್ದ ₹45 ಸಾವಿರ ಮೌಲ್ಯದ ಟೈರ್-ರಿಮ್ ಪತ್ತೆ; ಆರೋಪಿ ಬಂಧನ- Stolen tire-rim worth ₹45,000 recovered in Achapur; accused arrested
ಶಿವಮೊಗ್ಗ, ಜು. 4: ಸಾಗರ ತಾಲ್ಲೂಕಿನ ಆಚಾಪುರ ಗ್ರಾಮದಲ್ಲಿ ಕಳವಾಗಿದ್ದ ₹45 ಸಾವಿರ ಮೌಲ್ಯದ ಮೂರು ಟೈರ್ ಹಾಗೂ ರಿಮ್‌ಗಳನ್ನು ಆನಂದಪುರ ಪೊಲೀಸರು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.
ದಿನಾಂಕ 06 ಫೆಬ್ರವರಿ 2026ರಂದು ರಾತ್ರಿ ಆಚಾಪುರ ಗ್ರಾಮದ ವಿಜಯಗೌಡ ಕಾಂಪ್ಲೆಕ್ಸ್ ಮುಂಭಾಗ ನಿಲ್ಲಿಸಿದ್ದ ವಾಹನಗಳಿಂದ ಮೂರು ಟೈರ್ ಮತ್ತು ರಿಮ್‌ಗಳನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತು ದಾಖಲಾದ ದೂರಿನ ಮೇರೆಗೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 20/2026ರಡಿ ಬಿ.ಎನ್.ಎಸ್. ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡಿದ್ದ ಪಿಎಸ್‌ಐ ಹಾಗೂ ಆನಂದಪುರ ಪೊಲೀಸ್ ಠಾಣೆಯ ಸಿಬ್ಬಂದಿಯ ತಂಡವು ಜುಲೈ 3ರಂದು ಶಿವಮೊಗ್ಗದ ಟಿಪ್ಪು ನಗರದ ನಿವಾಸಿ ಸೋನು ಎಂಬ ಆರೋಪಿಯನ್ನು ಬಂಧಿಸಿದೆ.
ಆರೋಪಿಯಿಂದ ₹45,000 ಮೌಲ್ಯದ ಮೂರು ಟೈರ್ ಮತ್ತು ರಿಮ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆಯನ್ನು ಆನಂದಪುರ ಪೊಲೀಸರು ಮುಂದುವರಿಸಿದ್ದಾರೆ.
