ಹೆಣ ಬಿದ್ದ ಮೇಲೆ ಆರ್ ಟಿ ಒ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದಾ?Will RTO officials wake up after a body is found?

SUDDILIVE || SHIVAMOGGA

ಹೆಣ ಬಿದ್ದ ಮೇಲೆ ಆರ್ ಟಿ ಒ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದಾ?Will RTO officials wake up after a body is found?    

Rto, officials

ಶಿವಮೊಗ್ಗದ ಏರ್‌ಪೋರ್ಟ್‌ನಲ್ಲಿ ವಿಮಾನಗಳ ಸಂಖ್ಯೆ ಕಡಿಮೆಯಾಗಿದ್ದು, ಅಳಿದುಳಿದಿರುವ ವಿಮಾನಗಳಲ್ಲಿ ಪ್ರಯಾಣಿಸಲು ಪ್ರಯಾಣಿಕರು ಟ್ಯಾಕ್ಸಿ ಹಿಡಿದು ಏರ್‌ಪೋರ್ಟ್‌ಗೆ ತೆರಳುತ್ತಿರುವುದು ಸರ್ವೆ ಸಾಮಾನ್ಯವಾಗಿದೆ.

ಆದರೆ, ವೈಟ್ ಬೋರ್ಡ್ ವಾಹನಗಳನ್ನು ಟ್ಯಾಕ್ಸಿಗಳಾಗಿ ಬಳಸಲು ಅವಕಾಶವಿಲ್ಲದಿದ್ದರೂ, ವೈಟ್ ಬೋರ್ಡ್ ಕಾರುಗಳಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ಬಾಡಿಗೆ ಸಂಗ್ರಹಿಸಲಾಗುತ್ತಿದೆ ಎಂದು ಏರ್‌ಪೋರ್ಟ್ ಟ್ಯಾಕ್ಸಿ ಚಾಲಕರ ಸಂಘಟನೆ ಆರೋಪಿಸಿದೆ.

ಪ್ರಸ್ತುತ ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ತಾತ್ಕಾಲಿಕವಾಗಿ ಇಂಡಿಗೋ ಹಾಗೂ ಸ್ಪೈಸ್‌ಜೆಟ್ ವಿಮಾನಗಳ ಹಾರಾಟ ರದ್ದುಗೊಂಡಿದ್ದು, ಸ್ಟಾರ್ ಏರ್‌ಲೈನ್ಸ್‌ನ ವಿಮಾನ ಹಾರಾಟ ಮಾತ್ರ ನಡೆಯುತ್ತಿದೆ. ಇದರಿಂದ ಶಿವಮೊಗ್ಗ ನಗರದಿಂದ ಏರ್‌ಪೋರ್ಟ್‌ಗೆ ತೆರಳುವ ಪ್ರಯಾಣಿಕರು ಟ್ಯಾಕ್ಸಿಗಳನ್ನೇ ಹೆಚ್ಚಾಗಿ ಅವಲಂಬಿಸುತ್ತಿದ್ದಾರೆ.

ಆದರೆ, ಟ್ಯಾಕ್ಸಿ ಸೇವೆಯಲ್ಲಿ ವೈಟ್ ಬೋರ್ಡ್ ಕಾರುಗಳ ಹಾವಳಿ ಹೆಚ್ಚಾಗಿದ್ದು, ಈ ಕುರಿತು ಈಗಾಗಲೇ ಸಂಬಂಧಪಟ್ಟ ಆರ್‌ಟಿಒ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸಂಘಟನೆ ಆರೋಪಿಸಿದೆ. ಆರ್‌ಟಿಒ ಅಧಿಕಾರಿಗಳ ನಿರ್ಲಕ್ಷ್ಯವೇ ಏರ್‌ಪೋರ್ಟ್‌ನಲ್ಲಿ ವೈಟ್ ಬೋರ್ಡ್ ವಾಹನಗಳ ಹಾವಳಿ ಹೆಚ್ಚಲು ಕಾರಣವಾಗಿದೆ ಎಂದು ಸಂಘಟನೆ ದೂರಿದೆ.

ಈ ಸಂಬಂಧ ಸಂಘಟನೆಯ ಸದಸ್ಯರು ಇಂದು ವೈಟ್ ಬೋರ್ಡ್ ವಾಹನಗಳ ಚಾಲಕರೊಂದಿಗೆ ಗಲಾಟೆ ನಡೆಸಿದರು. ಗ್ರಾಹಕರು ಇದ್ದ ಸಂದರ್ಭದಲ್ಲೇ ವೈಟ್ ಬೋರ್ಡ್ ಕಾರುಗಳನ್ನು ಅಡ್ಡಗಟ್ಟಿ ಜಗಳ ನಡೆಸಿದ ಘಟನೆ ನಡೆಯಿತು.

"ಹೆಣ ಬಿದ್ದ ಮೇಲೆಯೇ ಈ ಬಗ್ಗೆ ಕ್ರಮ ಆಗುವುದಾ? ಅಥವಾ ಹೆಣ ಬೀಳುವ ಮೊದಲೇ ಕ್ರಮ ಆಗಲಿದೆಯಾ?" ಎಂಬ ಪ್ರಶ್ನೆಯನ್ನು ಸಂಘಟನೆ ಎತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Will RTO officials wake up after a body is found? 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close