ಸಾಗರ ಜಂಗಮ ಮಹಿಳಾ ಸಮಾಜದ ನಾಲ್ಕನೇ ವರ್ಷದ ವಾರ್ಷಿಕೋತ್ಸವ- Fourth anniversary of the Sagar Jangam Mahila Samaj

 SUDDILIVE || SAGARA

ಸಾಗರ ಜಂಗಮ ಮಹಿಳಾ ಸಮಾಜದ ನಾಲ್ಕನೇ ವರ್ಷದ ವಾರ್ಷಿಕೋತ್ಸವ- Fourth anniversary of the Sagar Jangam Mahila Samaj   

Mahila, samaj

ಸಾಗರ, ಆ.3: ಸಾಗರದ  ಜಂಗಮ ಮಹಿಳಾ ಸಮಾಜದ ನಾಲ್ಕನೇ ವರ್ಷದ ವಾರ್ಷಿಕೋತ್ಸವ, ಸಮಾಜದ  ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ "ಪ್ರಶಸ್ತಿ ಪುರಸ್ಕಾರ" ನೀಡಲಾಯಿತು.

ಕಾರ್ಯಕ್ರಮವು ಸಮಾಜದ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಪೋಷಕರ ಸಮ್ಮುಖದಲ್ಲಿ ಆತ್ಮೀಯ ವಾತಾವರಣದಲ್ಲಿ ನಡೆಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಗುರಿಗಳನ್ನು ಸಾಧಿಸುವಂತೆ ಪ್ರೋತ್ಸಾಹಿಸಲಾಯಿತು. ಸಮಾಜದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಸ್ನೇಹಿತರ ದಿನಾಚರಣೆ ನಡೆಸಲಾಯಿತು

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಕಲಾ ಉಮಾಪತಿ ಅವರು ನಿರ್ವಹಿಸಿದರು. ನಿರ್ದೇಶಕರಾದ ಉಷಾಗಿರಿಧರ್, ಅಧ್ಯಕ್ಷರಾದ ಅರುಣಾ ಎಸ್ ಹಿರೇಮಠ್ ಉಪಾಧ್ಯಕ್ಷರಾದ ನಿರ್ಮಲ ನಟರಾಜ್ ಉಪಸ್ಥಿತರಿದ್ದರು.  ಶ್ರೀಮತಿ ಪದ್ಮಾ ಅವರು ಸ್ವಾಗತಿಸಿ, ಶ್ರೀಮತಿ ಅರುಣಾ ನಾಯಕ್ ವಂದನಾರ್ಪಣೆ ಸಲ್ಲಿಸಿದರು.

ವೇದಿಕೆಯಲ್ಲಿ  ಕಾರ್ಯದರ್ಶಿ ಶ್ರೀಮತಿ ರೇಣುಕಾ ಮೃತ್ಯುಂಜಯ, ಖಜಾಂಚಿ ಸುಮ ರಾಜು ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.

ಈ ಸಂದರ್ಭದಲ್ಲಿ ಸಮಾಜದ ಬಗ್ಗೆ ಮಾತನಾಡಿದ ಶಕುಂತಲಮ್ಮ ಅವರು, ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಮೂಲಾಧಾರವಾಗಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವ ಮೂಲಕ ಅವರಿಗೆ ಮತ್ತಷ್ಟು ಉತ್ತೇಜನ ನೀಡುವುದು ಜಂಗಮ ಮಹಿಳಾ ಸಮಾಜದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು..

ಕಾರ್ಯಕ್ರಮದಲ್ಲಿ ಜಂಗಮ ಮಹಿಳಾ ಸಮಾಜದ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Fourth anniversary of the Sagar Jangam Mahila Samaj

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close