ಮೊದಲ ಬಾರಿಗೆ ಮುಳುಗಿದ ಮಂಟಪ-ಅಪಾಯ ಮಟ್ಟ ತಲುಪಲಿದ್ದಾಳಾ ತುಂಗೆ? The first submerged pavilion - is it about to reach danger level?

 SUDDILIVE || SHIVAMOGGA

ಮೊದಲ ಬಾರಿಗೆ ಮುಳುಗಿದ ಮಂಟಪ-ಅಪಾಯ ಮಟ್ಟ ತಲುಪಲಿದ್ದಾಳಾ ತುಂಗೆ? The first submerged pavilion - is it about to reach danger level?   

Submerged, pavillion

ಶಿವಮೊಗ್ಗ: ಮೊದಲ ಬಾರಿಗೆ ಈ ಬಾರಿ ತುಂಗಾ ನದಿಯ ಕೋರ್ಪಳಯ್ಯನ ಛತ್ರ ಹಿಂಭಾಗದ ಮಂಟಪ ಮುಳುಗಿದೆ, ತುಂಗ ಜಲಾಶಯದಿಂದ ನದಿಗೆ 80 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು ಪರಿಣಾಮ ಮಂಟಪ ಮುಳುಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆ ಹಾಗೂ ಮಲೆನಾಡು ಭಾಗದಲ್ಲಿ ದಾಖಲಾಗುತ್ತಿರುವ ಭಾರೀ ಮಳೆಯಿಂದ ತುಂಗಾ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಈ ಮಳೆಗಾಲದಲ್ಲಿ ಮೊದಲ ಬಾರಿಗೆ ನಗರದ ಕೋರ್ಪಳಯ್ಯನ ಛತ್ರ ಹಿಂಭಾಗದಲ್ಲಿರುವ ಮಂಟಪ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ. ನದಿಯ ನೀರಿನ ಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನದಿ ತೀರದ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಜಲಾಶಯದಿಂದ ಪ್ರಸ್ತುತ ಸುಮಾರು 80 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದೇ ವೇಳೆ ಜಲಾಶಯಕ್ಕೆ ಸುಮಾರು 82 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಒಳಹರಿವು ಮತ್ತು ಹೊರಹರಿವು ಬಹುತೇಕ ಸಮ ಪ್ರಮಾಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನದಿ ಜಲಾನಯನ ಪ್ರದೇಶದ ಮೇಲ್ಭಾಗದಲ್ಲಿ ಬೆಳಗ್ಗೆಯಿಂದಲೂ ಉತ್ತಮ ಮಳೆಯಾಗುತ್ತಿರುವುದರಿಂದ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಹರಿವು ಇನ್ನೂ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ ಇದ್ದರೂ, ರಾತ್ರಿ ವೇಳೆಗೆ 90 ಸಾವಿರ ಕ್ಯೂಸೆಕ್ ತಲುಪುವ ಸಾಧ್ಯತೆ ಕಡಿಮೆ ಎಂದು ಅಂದಾಜಿಸಲಾಗಿದೆ. ಪರಿಸ್ಥಿತಿಯನ್ನು ಅವಲಂಬಿಸಿ 83 ರಿಂದ 85 ಸಾವಿರ ಕ್ಯೂಸೆಕ್ ವರೆಗೆ ಹೊರಹರಿವು ಹೆಚ್ಚಿಸುವ ಸಾಧ್ಯತೆ ಇದ್ದು ಅಪಾಯ ಮಟ್ಟವನ್ನ ತುಂಗೆ ತಲುಪಲಿದೆಯಾ ಎಂಬುದು ಕಾದು ನೋಡಬೇಕಿದೆ. 

ಒಳಹರಿವು ಏಕಾಏಕಿ ಹೆಚ್ಚಾದರೆ ಅದಕ್ಕೆ ಅನುಗುಣವಾಗಿ ಹೊರಹರಿವನ್ನೂ ಹೆಚ್ಚಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಸ್ವಲ್ಪ ಕೆಳಗಿದ್ದರೂ, ಮಳೆಯ ತೀವ್ರತೆ ಮುಂದುವರಿದರೆ ಪರಿಸ್ಥಿತಿಯಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇರುವುದರಿಂದ ನಿರಂತರ ನಿಗಾವಹಿಸಲಾಗಿದೆ.

ಕೋರ್ಪಳಯ್ಯನ ಛತ್ರ ಹಿಂಭಾಗದ ಮಂಟಪ ಮುಳುಗಿರುವುದು ತುಂಗಾ ನದಿಯ ನೀರಿನ ಮಟ್ಟ ಏರಿಕೆಯ ಸ್ಪಷ್ಟ ಸೂಚಕವಾಗಿದೆ. ನದಿ ತೀರದ ನಿವಾಸಿಗಳು, ಸಾರ್ವಜನಿಕರು ಹಾಗೂ ಪ್ರವಾಸಿಗರು ನದಿಯ ಬಳಿ ತೆರಳದಂತೆ ಸಂಬಂಧಪಟ್ಟ ಇಲಾಖೆ ಎಚ್ಚರಿಕೆ ನೀಡಿದ್ದು, ಅನಗತ್ಯವಾಗಿ ನೀರಿನ ಸಮೀಪ ಹೋಗುವುದನ್ನು ತಪ್ಪಿಸುವಂತೆ ಮನವಿ ಮಾಡಲಾಗಿದೆ.

The first submerged pavilion - is it about to reach danger level?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close