ವಿದ್ಯುತ್ ಶಾಕ್ ನಿಂದ ಶಾರೂಕ್ ಖಾನ್ ನಿಧನ-Shah Rukh Khan dies of electric shock.

 SUDDILIVE || SHIVAMOGGA

ಲಪ್ಪಾ ವಿದ್ಯುತ್ ಶಾಕ್ ನಿಂದ ಶಾರೂಕ್ ಖಾನ್ ನಿಧನ-Shah Rukh Khan dies of electric shock.       
Sharuk, khan



ಹೊಳೆಹೊನ್ನೂರು: ಹೊಸದಾಗಿ ಖರೀದಿಸಿ ತಂದಿದ್ದ ವಾಲ್‌ಕೆರ್ ಪುಟ್ಟಿ (ಲಪ್ಪಾ ಉಜ್ಜುವ) ಮಿಷನ್‌ ಅನ್ನು ಮನೆಯಲ್ಲಿ ಟ್ರಯಲ್‌ ಮಾಡುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಯುವ ಪೈಂಟರ್‌ವೊಬ್ಬರು ಮೃತಪಟ್ಟಿರುವ ದುರ್ಘಟನೆ ಹೊಳೆಹೊನ್ನೂರು ಸಮೀಪದ ಯಡೇಹಳ್ಳಿಯಲ್ಲಿ ನಡೆದಿದೆ.

ಮೃತರನ್ನು ಯಡೇಹಳ್ಳಿ ನಿವಾಸಿ ಶಾರುಖ್ ಖಾನ್ (26) ಎಂದು ಗುರುತಿಸಲಾಗಿದೆ. ಅವರು ಯಡೇಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪೈಂಟರ್‌ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಮಂಗಳವಾರ ಶಿವಮೊಗ್ಗದಲ್ಲಿ ಹೊಸದಾಗಿ ಖರೀದಿಸಿ ತಂದಿದ್ದ ವಾಲ್‌ಕೆರ್ ಪುಟ್ಟಿ ಉಜ್ಜುವ ಮಿಷನ್‌ ಅನ್ನು ಶಾರುಖ್ ಖಾನ್ ತಮ್ಮ ಮನೆಯಲ್ಲಿ ಟ್ರಯಲ್‌ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್‌ ಪ್ರವಹಿಸಿದೆ. ತೀವ್ರ ಅಸ್ವಸ್ಥಗೊಂಡು ಸ್ಥಳದಲ್ಲೇ ಕುಸಿದುಬಿದ್ದ ಅವರನ್ನು ಕುಟುಂಬಸ್ಥರು ಹಾಗೂ ಸ್ಥಳೀಯರು ಕೂಡಲೇ ಹೊಳೆಹೊನ್ನೂರು ಸಮುದಾಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆದರೆ, ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಶಾರುಖ್ ಖಾನ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕುಟುಂಬಕ್ಕೆ ಆಘಾತ

ಪೈಂಟರ್‌ ವೃತ್ತಿಯ ಮೂಲಕ ಕುಟುಂಬವನ್ನು ನಿರ್ವಹಿಸುತ್ತಿದ್ದ ಶಾರುಖ್ ಖಾನ್ ಅವರ ಅಕಾಲಿಕ ಸಾವು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ. ಸುಮಾರು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ಶಾರುಖ್‌ಗೆ ಪತ್ನಿ, ಎರಡು ವರ್ಷದ ಹೆಣ್ಣು ಮಗು ಹಾಗೂ ಎರಡು ತಿಂಗಳ ಗಂಡು ಮಗು ಇದ್ದಾರೆ.

ಮಕ್ಕಳು ಇನ್ನೂ ಚಿಕ್ಕವರಾಗಿರುವ ಸಂದರ್ಭದಲ್ಲೇ ಕುಟುಂಬದ ಆಧಾರವಾಗಿದ್ದ ಶಾರುಖ್ ಖಾನ್ ಮೃತಪಟ್ಟಿರುವುದು ಕುಟುಂಬದವರ ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ.

ಘಟನೆಯ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Shah Rukh Khan dies of electric shock.       

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close