SUDDILIVE || SHIVAMOGGA
ಗಾಂಧಿಬಜಾರ್‌ನಲ್ಲಿ ಕಳೆದುಹೋದ ಮಗು ಪತ್ತೆ-Child lost in Gandhi Bazaar found
ಶಿವಮೊಗ್ಗ: ನಗರದ ಗಾಂಧಿಬಜಾರ್‌ನ ಎಸ್.ಎನ್. ಸರ್ಕಲ್ ಸಮೀಪ ತಾಯಿಯಿಂದ ಕಳೆದುಹೋಗಿದ್ದ ಮಗುವನ್ನು ಶಿವಮೊಗ್ಗ ಜಿಲ್ಲಾ ಪೊಲೀಸರ ERSS-112 ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಪತ್ತೆಹಚ್ಚಿ, ತಾಯಿಗೆ ಸುರಕ್ಷಿತವಾಗಿ ಒಪ್ಪಿಸಿದ್ದಾರೆ.
ಮಗು ಕಾಣೆಯಾಗಿರುವ ಕುರಿತು ಮಗುವಿನ ತಾಯಿ ತುರ್ತು ಸಹಾಯವಾಣಿ 112ಕ್ಕೆ ದೂರು ನೀಡಿದ್ದರು. ಮಾಹಿತಿ ಲಭ್ಯವಾಗುತ್ತಿದ್ದಂತೆ ಕೋಟೆ ಪೊಲೀಸ್ ಠಾಣೆಯ ERSS-112 ಅಧಿಕಾರಿ ಶ್ರೀಮತಿ ಜ್ಯೋತಿ, WHC ಹಾಗೂ ವಾಹನ ಚಾಲಕ ಶ್ರೀ ಚರಣ್, AHC ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಮಗುವಿನ ಪತ್ತೆಗೆ ಮುಂದಾದರು.
ತ್ವರಿತ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಮಗುವನ್ನು ಪತ್ತೆಹಚ್ಚಿ ಯಾವುದೇ ಅಪಾಯವಾಗದಂತೆ ತಾಯಿಯ ವಶಕ್ಕೆ ಒಪ್ಪಿಸಿದರು. ಸಮಯಪ್ರಜ್ಞೆ ಹಾಗೂ ಕರ್ತವ್ಯನಿಷ್ಠೆಯಿಂದ ತುರ್ತು ಪರಿಸ್ಥಿತಿಯಲ್ಲಿ ಸ್ಪಂದಿಸಿ ಮಗುವನ್ನು ಸುರಕ್ಷಿತವಾಗಿ ತಾಯಿಗೆ ಸೇರಿಸಿದ ERSS-112 ಸಿಬ್ಬಂದಿಯ ಕಾರ್ಯಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದನೆ ವ್ಯಕ್ತಪಡಿಸಲಾಗಿದೆ.
ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು 112 ಸಹಾಯವಾಣಿಗೆ ಮಾಹಿತಿ ನೀಡುವ ಮೂಲಕ ಪೊಲೀಸರ ನೆರವು ಪಡೆಯಬಹುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
