ಸ್ವಪಕ್ಷದ ನಾಯಕರ ವಿರುದ್ಧ ಟೀಕೆ, ಹೆಸ್ ಎಸ್ ಸುಂದರೇಶ್ ಗೆ ಕಾರಣ ಕೇಳಿ ನೋಟಿಸ್- H S Sundaresh gets notice for criticism against own party leaders

SUDDILIVE || SHIVAMOGGA

ಸ್ವಪಕ್ಷದ ನಾಯಕರ ವಿರುದ್ಧ ಟೀಕೆ, ಹೆಸ್ ಎಸ್ ಸುಂದರೇಶ್ ಗೆ ಕಾರಣ ಕೇಳಿ ನೋಟಿಸ್- H S Sundaresh gets notice for criticism against own party leaders   

Sundresh, notice


ಶಿವಮೊಗ್ಗ / ಬೆಂಗಳೂರು:
ಮಾಜಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ (DCC) ಅಧ್ಯಕ್ಷರು ಹಾಗೂ ಹಾಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷರಾದ ಹೆಚ್.ಎಸ್. ಸುಂದರೇಶ್ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಶೋಕಾಸ್ (ಕಾರಣ ಕೇಳಿ) ನೋಟಿಸ್ ಜಾರಿ ಮಾಡಿದೆ.

ಸೆಪ್ಟೆಂಬರ್ 23, 2026 ರಂದು ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುಂದರೇಶ್ ಅವರು ನೀಡಿದ ಬಹಿರಂಗ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು. ಈ ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಸಂಘಟನಾ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಅವರ 'ಸಂಘಟನಾ ಸೃಜನ ಅಭಿಯಾನ' ಕಾರ್ಯಕ್ರಮದ ಕುರಿತು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನಾಡಿರುವುದು ಸ್ಥಳೀಯ ಮುಖಂಡರಲ್ಲಿ ತೀವ್ರ ಅಸಮಾಧಾನ ಮತ್ತು ಗೊಂದಲವನ್ನು ಉಂಟುಮಾಡಿತ್ತು.

ಈ ಘಟನೆಯನ್ನು ತೀವ್ರವಾಗಿ ಪರಿಗಣಿಸಿರುವ KPCC ಶಿಸ್ತು ಪಾಲನಾ ಸಮಿತಿ ಅಧ್ಯಕ್ಷರ ಸೂಚನೆಯಂತೆ, ಪಕ್ಷದ ಉಪಾಧ್ಯಕ್ಷರು ಮತ್ತು ಮಾಜಿ ಎಂಎಲ್‌ಸಿ ಎಂ. ರಾಮಚಂದ್ರಪ್ಪ ಅವರು ಸುಂದರೇಶ್ ಅವರಿಗೆ ಈ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ನೋಟಿಸ್ ತಲುಪಿದ ೭ (ಏಳು) ದಿನಗಳ ಒಳಗಾಗಿ ಈ ಪ್ರಸಂಗದ ಕುರಿತು ವಿವರಣೆ ಅಥವಾ ಸಮಜಾಯಿಷಿ ನೀಡಲು ಸೂಚಿಸಲಾಗಿದ್ದು, ತಪ್ಪಿದಲ್ಲಿ ಪಕ್ಷದ ನಿಯಮಾವಳಿಗಳ ಪ್ರಕಾರ ಸೂಕ್ತ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಈ ನೋಟಿಸ್‌ನ ಪ್ರತಿಯನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ (DCC) ಸೂಡಾ ಅಧ್ಯಕ್ಷರಾದ ಹೆಚ್.ಎಸ್. ಸುಂದರೇಶ್ ಹಾಗೂ ಪಕ್ಷದ ಮುಖಂಡರ ಗಮನಕ್ಕೆ ರವಾನಿಸಲಾಗಿದೆ.

H S Sundaresh gets notice for criticism against own party leaders

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close