SUDDILIVE || SHIVAMOGGA
ರಾಘವೇಂದ್ರ ಏಕವಚನದ ಮಾತಿಗೆ ಬೇಳೂರು ತಿರುಗೇಟು: “ನಾನು ಶುರು ಮಾಡಿದರೆ ನೀನು ಗಾಳಿಗೆ ತೂರಿ ಹೋಗುತ್ತೀಯಾ”-If I start, will you run away? - To whom did Belur say?
ಶಿವಮೊಗ್ಗ: ಸಂಸದ ಬಿ.ವೈ. ರಾಘವೇಂದ್ರ ಅವರು ಸಚಿವ ಮಧು ಬಂಗಾರಪ್ಪ ವಿರುದ್ಧ ಏಕವಚನದಲ್ಲಿ ಮಾತನಾಡಿರುವುದನ್ನು ಖಂಡಿಸಿರುವ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ರಾಘವೇಂದ್ರ ಅವರ ಮಾತುಗಳಿಗೆ ಪ್ರತಿಕ್ರಿಯಿಸಿ, “ಮಧು ಬಂಗಾರಪ್ಪ ವಿರುದ್ಧ ವೀರ ಕಂಠೀರವ, ಶಿಕಾರಿಪುರದ ಶೂರರ ರೀತಿಯಲ್ಲಿ ಮಾತನಾಡಿದ್ದಾರೆ. ನಿಮ್ಮನ್ನು ಮತ್ತು ನಿಮ್ಮ ತಮ್ಮನನ್ನು ನಾನು ಹತ್ತಿರದಿಂದ ನೋಡಿ ಬಂದಿದ್ದೇನೆ. ನನಗೂ ಏಕವಚನದಲ್ಲಿ ಮಾತನಾಡಲು ಬರುತ್ತದೆ. ನಾನು ಶುರು ಮಾಡಿದರೆ ನೀನು ಗಾಳಿಗೆ ತೂರಿ ಹೋಗುತ್ತೀಯಾ” ಎಂದು ಸವಾಲಿನ ಧಾಟಿಯಲ್ಲಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಬಗ್ಗೆ ತಮಗೆ ಅಪಾರ ಗೌರವವಿದೆ. ಪಕ್ಷದ ವಿಚಾರದಲ್ಲಿ ಅವರ ವಿರುದ್ಧ ರಾಜಕೀಯವಾಗಿ ಮಾತನಾಡಬೇಕಾದ ಸಂದರ್ಭ ಬಂದರೂ, ಅವರ ವಿರುದ್ಧ ಏಕವಚನ ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಬಿ.ವೈ. ರಾಘವೇಂದ್ರ ಅವರಿಗೆ ಸವಾಲು ಹಾಕಿದ ಬೇಳೂರು, ಇತರರಿಗೆ ಸವಾಲು ಹಾಕುವ ಮೊದಲು ಮುಂದಿನ ಚುನಾವಣೆಯಲ್ಲಿ ಶಿಕಾರಿಪುರದಲ್ಲಿ ಗೆಲ್ಲುವುದನ್ನು ನೋಡಿಕೊಳ್ಳಲಿ ಎಂದು ಹೇಳಿದರು. ಕಳೆದ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಅವರಿಗೆ ಶಿಕಾರಿಪುರದಲ್ಲಿ ಟಿಕೆಟ್ ನೀಡಿದ್ದರೆ ವಿಜಯೇಂದ್ರ ಹಾರಿ ಹೋಗುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‌ಗೆ ಯಾರು ಬಂದರೂ ಸ್ವಾಗತ
ಪಕ್ಷ ಸೇರ್ಪಡೆ ವಿಚಾರವಾಗಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಕಾಂಗ್ರೆಸ್ ಪಕ್ಷ ಯಾರೊಬ್ಬರ ವೈಯಕ್ತಿಕ ಸ್ವತ್ತಲ್ಲ. ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಯಾರು ಬಂದರೂ ಸ್ವಾಗತವಿದೆ. ಯಾರನ್ನೂ ಬೇಡ ಎನ್ನಲು ಯಾರಿಗೂ ಅಧಿಕಾರವಿಲ್ಲ ಎಂದರು.
ಬಿಜೆಪಿಯ ಬಳ್ಳಾರಿ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್‌ನಿಂದಲೂ ಬೃಹತ್ ಹೋರಾಟ ರೂಪಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು. ಶಿಕಾರಿಪುರದಿಂದಲೇ ‘ಭಾರತ್ ಜೋಡೋ’ ಮಾದರಿಯ ಬೃಹತ್ ಪಾದಯಾತ್ರೆ ಹಾಗೂ ಹೋರಾಟ ಆರಂಭಿಸಿ ಬಿಜೆಪಿಗೆ ರಾಜಕೀಯವಾಗಿ ಪ್ರತ್ಯುತ್ತರ ನೀಡಲಾಗುವುದು ಎಂದು ಹೇಳಿದರು.
ಸುಂದರೇಶ್ ಹೇಳಿಕೆಗೆ ಬೇಳೂರು ಪ್ರತಿಕ್ರಿಯೆ
ಕಾಂಗ್ರೆಸ್ ಮುಖಂಡ ಎಚ್.ಎಸ್. ಸುಂದರೇಶ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬೇಳೂರು, ಅಧಿಕಾರ ಇಲ್ಲದಿರುವುದು ಹಾಗೂ ಜಿಲ್ಲಾಧ್ಯಕ್ಷ ಸ್ಥಾನ ಸಿಗದಿರುವ ಬೇಸರದಿಂದ ಅವರು ಈ ರೀತಿಯ ಹೇಳಿಕೆ ನೀಡಿರಬಹುದು ಎಂದು ಅಭಿಪ್ರಾಯಪಟ್ಟರು. ಯಾರೂ ನೇರವಾಗಿ ಪಕ್ಷದ ವಿರುದ್ಧ ಮಾತನಾಡಬಾರದು ಎಂದು ಅವರು ಹೇಳಿದರು.
ಇವತ್ತು ಚೆನ್ನಿ ದೆವ್ವ ಬಂದ ಹಾಗೆ ಆಡಬಹುದು
ಹೇಳಿಕೆ ನಂತರ ಶಾಸಕ ಗೋಪಾಲ ಕೃಷ್ಣ ಬೇಳೂರು ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ತೆರಳುವಿರಾ ಎಂಬ ಪ್ರಶ್ನೆ ನಾನು ಹೋಗಲ್ಲ ಇವತ್ತು ಶಿವಮೊಗ್ಗದ ಶಾಸಕ ಚೆನ್ನಿಗೆ ಬಿಟ್ಟಿದ್ದು, ಇವತ್ತುದೆವ್ವ ಬಂದ ಹಾಗೆ ಆಡಬಹುದು ಅವರು ಎಂದು ವ್ಯಂಗ್ಯವಾಡಿದ್ದಾರೆ. ನಂತರ ವಂದೇ ಮಾತರಂ ಹಾಡನ್ನ ಎರಡು ಸಾಲಿನ ಹಾಡಬಾರದು ಪೂರ್ಣಪ್ರಮಾಣದ ಹಾಡುಹೇಳಬೇಕು ಎಂದಿದ್ದಕ್ಕೂ ಪ್ರತಿಕ್ರಿಯಿಸಿದ ಬೇಳೂರು ಸುಪ್ರೀಂಕೋರ್ಟ್ ವಂದೇ ಮಾತರಂ ಬಗ್ಗೆಏನು ಹೇಳಿದೆ ನೋಡಿ ಚೆನ್ನಿಕಲಿಯಲಿ. ಜನಗಣ ಮನ ರಾಷ್ಟ್ರಗೀತಿಯೇ ಅಂತಿಮ ಎಂದು ಹೇಳಿದ್ದಾರೆ.
If I start, will you run away? - To whom did Belur say?
