ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ಚಾಲನೆ- Hindu Mahasabha launches Ganapati's Rajbeedi festival in Shivamogga

 SUDDILIVE || SHIVAMOGGA

ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ಚಾಲನೆ- Hindu Mahasabha launches Ganapati's Rajbeedi festival in Shivamogga  

Rajabeedi, utsav




ಶಿವಮೊಗ್ಗ: ನಗರದ ಕೋಟೆ ಭೀಮೇಶ್ವರ ದೇವಸ್ಥಾನದಿಂದ ಹಿಂದೂ ಮಹಾಸಭಾ ಗಣಪತಿಯ ಪ್ರಸಿದ್ಧ ರಾಜಬೀದಿ ಉತ್ಸವ ಶುಕ್ರವಾರ ಅದ್ದೂರಿಯಾಗಿ ಆರಂಭಗೊಂಡಿದೆ.

ಕೋಟೆ ಭೀಮೇಶ್ವರ ದೇವಸ್ಥಾನದಿಂದ ಮಧ್ಯಾಹ್ನ 11.15ರ ಸುಮಾರಿಗೆ ಗಣಪತಿ ಮೂರ್ತಿಯನ್ನು ರಾಜಬೀದಿ ಉತ್ಸವದ ಮೂಲಕ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಮಂಗಳವಾದ್ಯಗಳ ಮೊಳಗುವಿಕೆಯೊಂದಿಗೆ ಆರಂಭವಾದ ಉತ್ಸವದಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.






ಉತ್ಸವದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಕೋಟೆ ಭೀಮೇಶ್ವರ ಸ್ವಾಮಿ ದೇವಸ್ಥಾನದ ಬಳಿ ಗಣಪತಿ ಮೂರ್ತಿಗೆ ಹೂವಿನ ಹಾರ ಹಾಗೂ ಮೂಸುಂಬೆ ಹಾರವನ್ನು ಕ್ರೇನ್ ಮೂಲಕ ಹಾಕಿ ಗೌರವ ಸಲ್ಲಿಸಲಾಯಿತು. ಇದೇ ವೇಳೆ ಅಖಂಡ ಭಾರತವನ್ನ ಗಣಪತಿ ಹಿಂದೆ ಕಟ್ಟಲಾಗಿದೆ. 

ಮೆರವಣಿಗೆಯುದ್ದಕ್ಕೂ ಭಕ್ತರಲ್ಲಿ ಸಂಭ್ರಮ ಮನೆಮಾಡಿದ್ದು, ಕೇಸರಿ ಬಣ್ಣದ ಅಲಂಕಾರಗಳು ಹಾಗೂ ಮಂಗಳವಾದ್ಯಗಳ ನಡುವೆ ರಾಜಬೀದಿ ಉತ್ಸವ ಅದ್ದೂರಿಯಾಗಿ ಸಾಗುತ್ತಿದೆ.

Hindu Mahasabha launches Ganapati's Rajbeedi festival in Shivamogga  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close