SUDDILIVE || SHIVAMOGGA
ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಸೌಹಾರ್ದದ ಸಂದೇಶ: ಮುಸ್ಲಿಂ ಬಾಂಧವರಿಂದ ಅನ್ನಸಂತರ್ಪಣೆ-A message of harmony at the Ganesh Visarjana procession: Food offerings from Muslim relatives
ಶಿವಮೊಗ್ಗ: ನಗರದ ಗೋಪಿಶೆಟ್ಟಿಕೊಪ್ಪ ಸಿದ್ದೇಶ್ವರ ಸರ್ಕಲ್ ಸಮೀಪದ ದೇವರಹೊಲದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ ವೇಳೆ ಹಿಂದೂ–ಮುಸ್ಲಿಂ ಸೌಹಾರ್ದದ ಸಂದೇಶ ಸಾರುವಂತಹ ಕಾರ್ಯಕ್ರಮ ನಡೆಯಿತು.
ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಹಾಗೂ ಸಾರ್ವಜನಿಕರಿಗೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಬಾಂಧವರು ಅನ್ನಸಂತರ್ಪಣೆ ಹಾಗೂ ತಂಪು ಪಾನೀಯ ವಿತರಿಸಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಹಿಂದೂ ಬಾಂಧವರಿಗೆ ಆತ್ಮೀಯವಾಗಿ ಉಪಹಾರ ಮತ್ತು ತಂಪು ಪಾನೀಯಗಳನ್ನು ವಿತರಿಸುವ ಮೂಲಕ ಸೌಹಾರ್ದತೆ ಮೆರೆದರು.
ಮೊಹಲ್ಲಾ ಕಮಿಟಿಯಾದ ಇತ್ತಾ ಹಾದುಲ್ ಮುಸ್ಲಿಮೀನ್ ಕಮಿಟಿ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಮಿಟಿಯ ಅಧ್ಯಕ್ಷ ಅಸ್ಲಂ ಬೇಗ್, ಕಾರ್ಯದರ್ಶಿ ರಿಜ್ವಾನ್ (ಎಫ್‌ಕೆ ಫರ್ನಿಚರ್) ಹಾಗೂ ಪ್ರಮುಖರಾದ ಶಬ್ಬೀರ್, ಮುಜಮ್ಮಿಲ್ ಪಾಷ, ಜಾಕಿರ್ ಟಿಪ್ಪುನಗರ, ಜಬಿವುಲ್ಲಾ, ಲಿಯಾಖತ್ ಸೇರಿದಂತೆ ಹಲವು ಮುಸ್ಲಿಂ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ ವ್ಯವಸ್ಥೆಯನ್ನು ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಗಣಪತಿ ಸಮಿತಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವು ಪರಸ್ಪರ ಸಹಕಾರ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರಿದ್ದು, ವಿವಿಧ ಸಮುದಾಯಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸುವ ಪ್ರಯತ್ನಕ್ಕೆ ಸಾಕ್ಷಿಯಾಯಿತು.
