ಸಾಗರದ ಆಲಳ್ಳಿ ಹೊಸಕೆರೆ ಬಳಿ ನೀರುಪಾಲಾದ ಇಬ್ಬರು ಬಾಲಕರು; ದುರ್ಮರಣ-Two boys drown near Alalli Hosakere in Sagara; tragic death

 SUDDILIVE || SAGARA

ಸಾಗರದ ಆಲಳ್ಳಿ ಹೊಸಕೆರೆ ಬಳಿ ನೀರುಪಾಲಾದ ಇಬ್ಬರು ಬಾಲಕರು; ದುರ್ಮರಣ-Two boys drown near Alalli Hosakere in Sagara; tragic death    

Sagara, alahalli

13 ಮತ್ತು 11 ವರ್ಷದ ಬಾಲಕರ ಸಾವು; ಕುಟುಂಬಸ್ಥರ ಆಕ್ರಂಧನ 


ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಆಲಳ್ಳಿ ಗ್ರಾಮದ ಹೊಸಕೆರೆ ಬಳಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಮೃತ ಬಾಲಕರನ್ನು ಮುಳುಕೇರಿ ಗ್ರಾಮದ ಷಣ್ಮುಖ ಅವರ ಪುತ್ರ ಲೇಖನ್ (13) ಹಾಗೂ ಆಲಳ್ಳಿ ಗ್ರಾಮದ ಗಣೇಶ್ ಅವರ ಪುತ್ರ ಪುನೀತ್ (11) ಎಂದು ಗುರುತಿಸಲಾಗಿದೆ. ಇಬ್ಬರೂ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಎಳೆಯ ವಯಸ್ಸಿನ ಇಬ್ಬರು ಬಾಲಕರನ್ನು ಕಳೆದುಕೊಂಡ ಕುಟುಂಬಸ್ಥರ ದುಃಖ ಮುಗಿಲುಮುಟ್ಟಿದೆ. ಸಾಗರ ಉಪವಿಭಾಗೀಯ ಆಸ್ಪತ್ರೆಯ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಸ್ಥಳೀಯರಲ್ಲಿಯೂ ಘಟನೆ ತೀವ್ರ ಶೋಕವನ್ನುಂಟುಮಾಡಿದೆ.

Alalli, hosakere

ಘಟನೆಯಿಂದ ಆಘಾತಕ್ಕೊಳಗಾದ ಕುಟುಂಬಕ್ಕೆ ಶಾಸಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಿವೆ.

Two boys drown near Alalli Hosakere in Sagara; tragic death 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close