ಶಿವಮೊಗ್ಗ ದಸರಾ ಉದ್ಘಾಟನೆಯಲ್ಲಿ ವಂದೇ ಮಾತರಂ ಗೀತೆ ವಿವಾದ : ಪಾಲಿಕೆ ಆಯುಕ್ತ ಮಾಯಣ್ಣಗೌಡ ಸ್ಪಷ್ಟನೆ-Vande Mataram song controversy at Shivamogga Dasara inauguration: Municipal Commissioner Mayanna Gowda clarifies

SUDDILIVE || SHIVAMOGGA

ಶಿವಮೊಗ್ಗ ದಸರಾ ಉದ್ಘಾಟನೆಯಲ್ಲಿ ವಂದೇ ಮಾತರಂ ಗೀತೆ ವಿವಾದ : ಪಾಲಿಕೆ ಆಯುಕ್ತ ಮಾಯಣ್ಣಗೌಡ ಸ್ಪಷ್ಟನೆ-Vande Mataram song controversy at Shivamogga Dasara inauguration: Municipal Commissioner Mayanna Gowda clarifies

Dasara, vandematharam


ಶಿವಮೊಗ್ಗ : ಶಿವಮೊಗ್ಗ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಗೀತೆ ಗಾಯನಕ್ಕೆ ಸಂಬಂಧಿಸಿದಂತೆ ಎದುರಾಗಿರುವ ವಿವಾದದ ಕುರಿತು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು ಸ್ಪಷ್ಟನೆ ನೀಡಿದ್ದಾರೆ. 

ಶಿವಮೊಗ್ಗದಲ್ಲಿ ಮಾತನಾಡಿದ ಅವರು,
​ಆಡಳಿತ ಮಂಡಳಿಯು ಸರ್ಕಾರದ ನಿಯಮಾವಳಿ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ನಿರ್ದೇಶನದಂತೆ ನಿಗದಿತ ಟ್ರ್ಯಾಕ್ ಅನ್ನೇ ಬಳಸಿದ್ದು, ಯಾವುದೇ ರೀತಿಯ ಲೋಪದೋಷಗಳು ಸಂಭವಿಸಿಲ್ಲ ಎಂದರು.
​ಸರ್ಕಾರದ ಸುತ್ತೋಲೆಯ ಪ್ರಕಾರ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಪ್ಲೇ ಮಾಡಲು ಸೂಚಿಸಲಾಗಿತ್ತು. ಅದರಂತೆ ನಾವು ಎರಡು ಚರಣಗಳನ್ನು ಪ್ಲೇ ಮಾಡಿ, ತದನಂತರ ನಾಡಗೀತೆಯನ್ನು ಪ್ಲೇ ಮಾಡಿದ್ದೆವು. ಸಂಘಟನೆಯ ಕಡೆಯಿಂದ ಯಾವುದೇ ರೀತಿಯ ನಿಯಮ ಉಲ್ಲಂಘನೆಯಾಗಿಲ್ಲ" ಎಂದು ಸ್ಪಷ್ಟಪಡಿಸಿದರು.

​ಗೊಂದಲ ಉಂಟಾಗಲು ಕಾರಣವನ್ನು ವಿವರಿಸಿದ ಅವರು, "ವೇದಿಕೆಯಲ್ಲಿದ್ದ ಗಣ್ಯರು ಹಾಗೂ ನೆರೆದಿದ್ದ ಸಭಿಕರು ಸ್ವಯಂಪ್ರೇರಿತರಾಗಿ ಮೂರನೇ ಮತ್ತು ನಾಲ್ಕನೇ ಚರಣಗಳನ್ನು ಹಾಡಲು ಪ್ರಾರಂಭಿಸಿದರು. ಏಕಾಏಕಿ ಸ್ವಯಂಪ್ರೇರಿತವಾಗಿ ಹಾಡಿದ್ದರಿಂದ ವೇದಿಕೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸರ್ಕಾರದ ನಿಯಮಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ" ಎಂದರು.
​

ಇಂತಹ ಗೊಂದಲಗಳು ಪದೇ ಪದೇ ಮರುಕಳಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಮುಂದೆ ನಡೆಯುವ ಕಾರ್ಯಕ್ರಮಗಳಲ್ಲಿ ಇಂತಹ ಪ್ರಸಂಗಗಳು ಎದುರಾಗದಂತೆ ಜನಪ್ರತಿನಿಧಿಗಳು ಮತ್ತು ಗಣ್ಯರೊಂದಿಗೆ ಮಾತುಕತೆ ನಡೆಸಲಾಗುವುದು. ಜನದಟ್ಟಣೆ ಹಾಗೂ ಕಾರ್ಯಕ್ರಮದ ನಿರ್ವಹಣೆಗಾಗಿ ಮೊದಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು" ಎಂದು ಅವರು ಹೇಳಿದರು.
​

ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಲು ದಸರಾ ಸಮಿತಿಯು ಬದ್ಧವಾಗಿದೆ. ಈ ನಿಟ್ಟಿನಲ್ಲಿ ದಸರಾ ಸಮಿತಿಯ 14 ಕಾರ್ಯದರ್ಶಿಗಳು ಹಾಗೂ ಸದಸ್ಯರು ಶೀಘ್ರದಲ್ಲೇ ಜನಪ್ರತಿನಿಧಿಗಳನ್ನು ನೇರವಾಗಿ ಭೇಟಿ ಮಾಡಿ, ಸರ್ಕಾರದ ನಿಯಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಕಾರ್ಯಕ್ರಮಗಳ ಸುಗಮ ನಿರ್ವಹಣೆಗೆ ಸಹಕಾರ ಕೋರಲಿದ್ದಾರೆ ಎಂದು ಆಯುಕ್ತ ಮಾಯಣ್ಣಗೌಡ ಮಾಹಿತಿ ನೀಡಿದರು.

Vande Mataram song controversy at Shivamogga Dasara inauguration: Municipal Commissioner Mayanna Gowda clarifies

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close