ಸಾಗರದಲ್ಲಿ ಮಹಿಳಾ ಜಂಗಮ ಸಂಘದಿಂದ ಒಂಬತ್ತು ದಿನಗಳ ಕಾಲ ಕೊಕ್ಕೋಡಂಬ ದೇವಿಗೆ ಪೂಜೆ ಹಾಗೂ ಭಜನ ಕಾರ್ಯಕ್ರಮ-Nine-day worship and bhajan program for Kokkodamba Devi by Mahila Jangam Sangha in Sagar

SUDDILIVE || SAGARA

ಸಾಗರದಲ್ಲಿ ಮಹಿಳಾ ಜಂಗಮ ಸಂಘದಿಂದ ಒಂಬತ್ತು ದಿನಗಳ ಕಾಲ ಕೊಕ್ಕೋಡಂಬ ದೇವಿಗೆ ಪೂಜೆ ಹಾಗೂ ಭಜನ ಕಾರ್ಯಕ್ರಮ-Nine-day worship and bhajan program for Kokkodamba Devi by Mahila Jangam Sangha in Sagar

Kokkodamba, devi

ಸಾಗರ: ದಸರಾ ಹಬ್ಬದ ಪ್ರಯುಕ್ತ ದೇಶದಾದ್ಯಂತ ತಾಯಿ ಚಾಮುಂಡೇಶ್ವರಿಗೆ ವಿವಿಧ ರೀತಿಯ ಪೂಜೆಗಳು ನಡೆಯುತ್ತಿವೆ. ಇದರ ಭಾಗವಾಗಿ ಸಾಗರ ತಾಲೂಕು ಮಹಿಳಾ ಜಂಗಮ ಸಂಘವು ವಿಶೇಷವಾಗಿ ದಸರಾ ಆಚರಿಸುತ್ತಿದ್ದು, ಒಂಬತ್ತು ದಿನಗಳ ಕಾಲ ಕೊಕ್ಕೋಡಂಬ ದೇವಿಯ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ದಸರಾ ಹಬ್ಬ ಐದನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಸಂಘದ ಸದಸ್ಯೆಯರೆಲ್ಲರೂ ಒಟ್ಟಾಗಿ ಸೇರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಭಜನಾ ಕಾರ್ಯಕ್ರಮ ನಡೆಸಿ ಭಕ್ತಿಭಾವದಿಂದ ದೇವಿಯನ್ನು ಆರಾಧಿಸಿದರು.

ಒಂಬತ್ತು ದಿನಗಳ ಕಾಲ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಘದ ಸದಸ್ಯೆಯರು ಭಾಗವಹಿಸಿ ದೇವಿಯ ಭಜನೆ ಹಾಗೂ ಪೂಜಾ ಕೈಂಕರ್ಯಗಳ ಮೂಲಕ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ.

Nine-day worship and bhajan program for Kokkodamba Devi by Mahila Jangam Sangha in Sagar

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close