ಶಿವಮೊಗ್ಗದಲ್ಲಿ ಸೋಮಣ್ಣರಿಗೆ ಯುವ ಕಾಂಗ್ರೆಸ್ ಪ್ರತಿಭಾನೆಯ ಬಿಸಿ: ಕಪ್ಪು ಬಾವುಟ ಪ್ರದರ್ಶನ, ಕಾರಿಗೆ ಮುತ್ತಿಗೆ ಯತ್ನ-Youth Congress talent hot on Somanna's heels in Shivamogga: Black flag display, attempt to blockade car

 SUDDILIVE | SHIVAMOGGA

ಶಿವಮೊಗ್ಗದಲ್ಲಿ ಸೋಮಣ್ಣರಿಗೆ ಯುವ ಕಾಂಗ್ರೆಸ್ ಪ್ರತಿಭಾನೆಯ ಬಿಸಿ: ಕಪ್ಪು ಬಾವುಟ ಪ್ರದರ್ಶನ, ಕಾರಿಗೆ ಮುತ್ತಿಗೆ ಯತ್ನ-Youth Congress talent hot on Somanna's heels in Shivamogga: Black flag display, attempt to blockade car 
Black, flag



ಶಿವಮೊಗ್ಗ: ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಶಿವಮೊಗ್ಗದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯ ಬಿಸಿ ಎದುರಾಗಿದೆ.
ಎಸ್‌ಐಆರ್‌ನಲ್ಲಿ ಅಕ್ರಮ ಹಾಗೂ ಮತಗಳ್ಳತನ ನಡೆದಿದೆ ಎಂದು ಆರೋಪಿಸಿ, ಸಚಿವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಅವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಖಂಡಿಸಲಾಯಿತು. ಅಲ್ಲದೆ, ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸಚಿವ ವಿ. ಸೋಮಣ್ಣ ಅವರ ಭೇಟಿಯ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇಂದು ಪರೇಖ ಮಾಲ್ ಉದ್ಘಾಟನೆಗೆ ಬಂದಿದ್ದ ಸೋಮಣ್ಣ ರೈಲ್ವೆ ನಿಲ್ದಾಣದಿಂದ ಐಬಿಗೆ ತೆರಳುವಾಗ ಪರೇಖ ಮಾಲ್ ಎದುರೆ ಸಂಘಟನೆಯ ಕಾರ್ಯಕರ್ತರು ಕಪ್ಪ ಬಾವಟ ಪ್ರದರ್ಶಿಸಿದ್ದಾರೆ.

Youth Congress talent hot on Somanna's heels in Shivamogga: Black flag display, attempt to blockade car 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close