ಶಿವಮೊಗ್ಗಕ್ಕೆ ನಿಖಿಲ್ ಕುಮಾರಸ್ವಾಮಿ ಆಗಮನ: ಅಭಿಮಾನಿಗಳಿಂದ ಭರ್ಜರಿ ಸ್ವಾಗತ, ನಗರದಲ್ಲಿ ಟ್ರಾಫಿಕ್ ಜಾಮ್-Nikhil Kumaraswamy arrives in Shimoga: A grand welcome from fans, traffic jam in the city

 SUDDILIVE || SHIVAMOGGA

ಶಿವಮೊಗ್ಗಕ್ಕೆ ನಿಖಿಲ್ ಕುಮಾರಸ್ವಾಮಿ ಆಗಮನ: ಅಭಿಮಾನಿಗಳಿಂದ ಭರ್ಜರಿ ಸ್ವಾಗತ, ನಗರದಲ್ಲಿ ಟ್ರಾಫಿಕ್ ಜಾಮ್-Nikhil Kumaraswamy arrives in Shimoga: A grand welcome from fans, traffic jam in the city

ಶಿವಮೊಗ್ಗ: ರೈತ ಸ್ವಾಭಿಮಾನ ಯಾತ್ರೆಯಲ್ಲಿ ಪಾಲ್ಗೊಳ್ಳಲು ಶಿವಮೊಗ್ಗಕ್ಕೆ ಆಗಮಿಸಿದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು.

ನಗರದ ವಿದ್ಯಾನಗರ ರೈಲ್ವೆ ಫ್ಲೈಓವರ್ ಬಳಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದ ಅಭಿಮಾನಿಗಳು, ಬೈಕ್ ರ‍್ಯಾಲಿ ಮೂಲಕ ತ್ಯಾಜವಳ್ಳಿಯತ್ತ ತೆರಳಿದರು.

ಯಾತ್ರೆಯ ಅಂಗವಾಗಿ ಆಯನೂರಿನಲ್ಲಿ ಬಹಿರಂಗ ಸಭೆ ನಡೆಯಲಿದ್ದು, ಬಳಿಕ ನಿಖಿಲ್ ಕುಮಾರಸ್ವಾಮಿ ಅವರು ಭದ್ರಾವತಿಗೆ ತೆರಳಿ ಅಲ್ಲಿಯೂ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅವರ ಆಗಮನ ಹಾಗೂ ಬೈಕ್ ರ‍್ಯಾಲಿಯಿಂದಾಗಿ ಶಿವಮೊಗ್ಗ ನಗರದ ವಿದ್ಯಾನಗರ ಫ್ಲೈಓವರ್ ಮತ್ತು ತುಂಗಾ ನದಿ ಸೇತುವೆ ಭಾಗದಲ್ಲಿ ವಾಹನ ದಟ್ಟಣೆ ಉಂಟಾಗಿ, ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಪರದಾಡುವಂತಾಯಿತು.

Nikhil Kumaraswamy arrives in Shimoga: A grand welcome from fans, traffic jam in the city

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close