ಮೀಸಲಾತಿ ವರ್ಗೀಕರಣದ ವಿರುದ್ಧ ಬಂಜಾರ ಸಮುದಾಯ ಅರೆಬೆತ್ತಲೆ ಹೋರಾಟ-Banjara community fights half-naked against reservation classification

 SUDDILIVE || SHIVAMOGGA

ಮೀಸಲಾತಿ ವರ್ಗೀಕರಣದ ವಿರುದ್ಧ ಬಂಜಾರ ಸಮುದಾಯ ಅರೆಬೆತ್ತಲೆ ಹೋರಾಟ-Banjara community fights half-naked against reservation classification

Banjara, community


ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಬಂಜಾರ ಸಮುದಾಯದವರ ಹೋರಾಟ ಇಂದಿಗೆ 9 ನೇ ದಿನಕ್ಕೆ ಕಾಲಿಟ್ಟಿದೆ. ಇದರ ಅಂಗವಾಗಿ ಇಂದು ಸಮುದಾಯದವರು ಅರೆಬೆತ್ತಲೆ ಪ್ರತಿಭಟನೆ ನಡೆಸಿ ಪ್ರತಿಭಟನೆಗೆ ಕಿಚ್ಚು ಹಚ್ಚಿದ್ದಾರೆ. 

ಸೀನಪ್ಪ ಶೆಟ್ಟಿ (ಗೋಪಿ) ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಜಿಲ್ಲಾ ಬಂಜಾರ ಸಂಘದ ಉಪಾಧ್ಯಕ್ಷ ಜಗದೀಶ್ ನೇತೃತ್ವದಲ್ಲಿ 150 ಜನರು ಸೇರಿ ನಗರದ ಗೋಪಿ ವೃತ್ತದಲ್ಲಿ ಅರೆಬೆತ್ತಲೆ ಹಾಗೂ ಮಾನವ ಸರಪಳಿ ನಡೆಸುವ  ಮೂಲಕ   ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಬಂದು ಪ್ರತಿಭಟನೆ ಮುಂದುವರೆಸಿದ್ದಾರೆ. 

ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗಿಕರಣ ವಿರೋಧಿಸಿ ಸ್ಪೃಶ್ಯ- ಅಸ್ಪೃಶ್ಯ ಎಂಬ ಅಸಂವಿಧಾನಿಕ ಪದ ಬಳಕೆಯನ್ನು ಕಡತದಿಂದ ತೆಗೆದುಹಾಕಿ, ದಮನಿತ ಅಥವಾ ವಿಮುಕ್ತ ಜಾತಿಗಳೆಂದು ಹೆಸರಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ 'ಸಿ' ವರ್ಗದವರಿಗೂ ಅವರ ಜನಸಂಖ್ಯೆಗೆ ಅನುಗುಣವಾಗಿ ಶೇ. 6 ರಷ್ಟು ಮೀಸಲಾತಿ ನೀಡಬೇಕು. ಹಲವು ಆಯೋಗಗಳ ವರದಿಯಲ್ಲಿ ಇರುವಂತೆ ಅಲೆಮಾರಿಗಳಿಗೂ ಪ್ರತ್ಯೇಕ ಶೇ. 1ರಷ್ಟು ಮೀಸಲಾತಿ ನೀಡಬೇಕು ಇನ್ನು ಮುಂತಾದ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ನಾಳೆ ಸೈನ್ಸ್ ಮೈದಾನದಿಂದ  ಶಿವಮೊಗ್ಗ ಜಿಲ್ಲೆಯ ತಾಂಡಗಳ ಸುಮಾರು 5,000 ಜನರು ಸೇರಿ( ಜಿಲ್ಲೆಯ ಎಲ್ಲಾ ತಾಲೂಕುಗಳ ಹಾಗೂ ದಾವಣಗೆರೆ ಜಿಲ್ಲೆಯ ನ್ಯಾಮತಿ ಹೊನ್ನಾಳಿ ಚನ್ನಗಿರಿ  ತಾಂಡಾಗಳ‌ ಜನರು ಸೇರಿ )ಸೈನ್ಸ್‌ ಮೈದಾನದಿಂದ ಬಿಹೆಚ್‌ ರಸ್ತೆ ಹಾಗೂ ನೆಹರೂ ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ  ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ.

ವಿನೂತನ ಪ್ರತಿಭಟನೆಗಳು ನಡೆಸುತ್ತಿರುವುದರಿಂದ ನಾಳೆ ಕೊನೆಯ ದಿನದ ಪ್ರತಿಭಟನಾ ಮೆರವಣಿಗೆ ಇರುವುದರಿಂದ ಹಾಗೂ ಸರ್ಕಾರ ಪ್ರತಿಭಟನೆಗೆ  ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶ ಪ್ರತಿಭಟನಾಕಾರರಲ್ಲಿದೆ. 

Banjara community fights half-naked against reservation classification

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close