SHIVAMOGGA || SHIVAMOGGA
ಹೋಳಿ ಹಬ್ಬದದಿನದಂದು ವೀಲಿಂಗ್ ಬಿತ್ತು ಕೇಸ್-Wheeling case on Holi festival day
ಹೋಳಿ ಹಬ್ಬದ ದಿನ ಶುಭ ಮಂಗಳದ ಹೋಟೆಲ್ ಎದುರಿನ ರಸ್ತೆಯಲ್ಲಿ ವೀಲಿಂಗ್ ಮಾಡಿ ಸೋಷಿಯಲ್ ಮೀಡಿಯಾಕ್ಕೆ ಅಪ್ಲೋಡ್ ಮಾಡಿದವನನ್ನ ಪತ್ತೆಹಚ್ಚಿದ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಾ.04 ರಂದು ಶಿವಮೊಗ್ಗ ತಾಲೂಕು ಬಿಕ್ಕೋನ ಹಳ್ಳಿಯ ಮಂಜುನಾಥ ನಾಯ್ಕ ಹೋಳಿ ಹಬ್ಬದಂದು KA-14-HA7987 ಸಂಖ್ಯೆಯ KTM DUKE ಬೈಕ್ ನಲ್ಲಿ ಒಬ್ಬನನ್ನ ಕೂರಿಸಿಕೊಂಡು ವೀಲಿಂಗ್ ಮಾಡಿ ಸೊಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದನು. ಸೋಷಿಯಲ್ ಮೀಡಿಯಾ ಲಿಂಕ್ ನ್ನ ಡಿಪಿಒ ಸೋಷಿಯಲ್ ಮೀಡಿಯಾ ವಿಂಗ್ ಟ್ರಾಫಿಕ್ ಪೊಲೀಸ್ ಇನ್ ಸ್ಪೆಕ್ಟರ್ ದೇವರಾಜ್ ಮೊಬೈಲ್ ಗೆ ಬಂದಿದೆ.
ಇದನ್ನ ಪತ್ತೆ ಮಾಡಲು ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗಳನ್ನ ನೇಮಿಸಲಾಗಿತ್ತು. ಸಿಬ್ಬಂದಿಗಳು L L R ರಸ್ತೆಯ ಶುಭಮಂಗಳದ ಎದುರು ಬೈಕ್ ವಾಹನದಲ್ಲಿ ವೀಲಿಂಗ್ ನಡೆಸಿ, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಪ್‌ಲೋಡ್ ಮಾಡಿರುವುದು ಗಮನಕ್ಕೆ ಬಂದಿದೆ.
ಹಿನ್ನೆಲೆಯಲ್ಲಿ, KTM DUKE ಬೈಕ್ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಬೈಕ್ ಸವಾರನನ್ನ ಬಿಕ್ಕೋನಹಳ್ಳಿಯ ಮಂಜುನಾಥ ನಾಯ್ಕ್ ಎಂದು ಗುರುತು ಹಚ್ಚಲಾಯಿತು. ದುಡುಕಿನಿಂದ ಮತ್ತು ತನ್ನ ಪ್ರಾಣಕ್ಕೆ ಕುತ್ತುಬರುವಂತೆ ವೀಲಿಂಗ್ ಮಾಡಿದವನ ವಿರುದ್ಧ ಪ್ರಕರಣ ದಾಖಲಾಗಿದ್ದು ಮುಂದಿನಕ್ರಮ ಜರುಗಿಸಲಾಗಿದೆ. ಈ ಹಿಂದೆಯೂ ವೀಲಿಂಗ್ ಮಾಡಿ ಕೇಸ್ ಹಾಲಿಕೊಂಡಿದ್ದ ಮಂಜುನಾಥ ನಾಯ್ಕ ಮತ್ತೊಮ್ಮೆ ವೀಲಿಂಗ್ ಮಾಡಿ ಸಿಕ್ಕಿಕೊಂಡಿದ್ದಾನೆ. ಈ ಹುಚ್ಚುತನದಿಂದ ಯುವ ಸಮೂಹ ಹೊರಬರಬೇಕಿದೆ.
Wheeling case on Holi festival day
