SUDDILIVE || SHIVAMOGGA
ನಡುರಸ್ತೆಯಲ್ಲಿ ದಗದಗ ಹೊತ್ತಿ ಉರಿದ ಓಮಿನಿ-Omni caught fire in the middle of the road
ಚಲಿಸುತ್ತಿದ್ದ ವ್ಯಾನ್ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕಣ್ಣೆದುರೇ ಮಾರುತಿ ಓಮಿನಿ ಸುಟ್ಟು ಕರಕಲಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಕೆಲವೇ ಕ್ಷಣಗಳಲ್ಲಿ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿ ಆಗಿದೆ. ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಗ್ರಾಮದ ಬಳಿ ಸಾಗುತ್ತಿದ್ದ ಮಾರುತಿ ಓಮಿನಿ
ಕಾರಿನಲ್ಲಿ ಮೊದಲು ಹೊಗೆ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡಿದೆ. ರಸ್ತೆ ಮಧ್ಯದಲ್ಲಿಯೇ ಧಗಧಗನೆ ಹೊತ್ತಿ ಉರಿದ ಕಾರಿನ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಕಾರು ಬೆಳ್ಳೂರು ಸಮೀಪದ ದೇಮ್ಲಾಪುರ ಮೂಲದವರದ್ದೆಂದು ಹೇಳಲಾಗುತ್ತದೆ.
ಅದೃಷ್ಟವಶತ್ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
Omni caught fire in the middle of the road
