ಡಿವಿಎಸ್ ಶಾಲೆಗೆ ಶೈಕ್ಷಣಿಕ ಸಾಲಿನಲ್ಲಿ ಉತ್ತಮ ಫಲಿತಾಂಶ-DVS School achieves good academic results

 SUDDILIVE || SHIVAMOGGA

ಡಿವಿಎಸ್ ಶಾಲೆಗೆ ಶೈಕ್ಷಣಿಕ ಸಾಲಿನಲ್ಲಿ ಉತ್ತಮ ಫಲಿತಾಂಶ-DVS School achieves good academic results    

Dvs, school

2025-26 ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಪದವಿ ಹಾಗೂ ಪದವಿ ಕಾಲೇಜುಗಳಲ್ಲಿ ರ‌್ಯಾಂಕ್ ಪಡೆದಿರುವ ಬಗ್ಗೆ ಕಾರ್ಯದರ್ಶಿ ಎಸ್ಪಿ ದಿನೇಶ್ ಹಾಗೂ ಗೌರವಾಧ್ಯಕ್ಷ ಬಸಪ್ಪಗೌಡ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. 

ಮೊದಲಿಗೆ ಮಾತನಾಡಿದ ಬಸಪ್ಪ ಗೌಡ, SSLC  ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ 625-621 ನ್ನ ಪಡೆದು  ಶಾಂಭವಿ ಎಂಬ ವಿದ್ಯಾರ್ಥಿನಿ ಡಿವಿಎಸ್ ನ ಇತಿಹಾಸದಲ್ಲಿಯೇ ಪ್ರಥಮ ಸ್ಥಾನ ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಲಕ್ಷ್ಮೀ 625 ಕ್ಕೆ 602 ಅಂಕಪಡೆದಿದ್ದಾರೆ. ಇದರಿಂದ ಕಾಲೇಜು ಒಟ್ಟು 95.65% ಪಡೆದಿದೆ ಎಂದರು.

DVS ಪ್ರೌಢಶಾಲೆ ವಿನೋಬನಗರದಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದಿದೆ. ಪದವಿ ಪೂರ್ವ ಸ್ವತಂತ್ರ್ಯ ಕಾಲೇಜಿನಲ್ಲಿ 2025-26 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 5 ರ‌್ಯಾಂಕ್ ವಿಜ್ಞಾನದಲ್ಲಿ 1 ರ‌್ಯಾಂಕ್ ಕಲಾ ವಿಭಾಗದಲ್ಲಿ ಎರಡು ರ‌್ಯಾಂಕ್ ಪಡೆದು ಒಟ್ಟು 8 ರ‌್ಯಾಂಕ್ ಪಡೆದು 97.31 % ಪಡೆದಿದೆ ಎಂದರು. 

ದ್ವೀತೀಯ ಪಿಯುಸಿ ಸಂಯಕ್ತ ಪದವಿ ಪೂರ್ವ ಕಾಲೇಜಿನಲ್ಲಿ 100 ಕ್ಕೆ 100 ರಷ್ಟು ಅಂಕ ಪಡೆದು ಶೇ.93.51 ರಷ್ಟು ಫಲಿತಾಂಶ ಪಡೆದುಕೊಂಡಿದೆ. 2024-25 ನೇ ಸಾಲಿನಲ್ಲಿ ಒಟ್ಟು 6 ರ‌್ಯಾಂಕ್ ಗಳನ್ನ ಪಡೆದು 03 ಗೋಲ್ಡ್ ಮೆಡಲ್ ಗಳನ್ನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಕುವೆಂಪು ವಿವಿಯಲ್ಲಿ ಪಡೆದಿದೆ. 83 ವರ್ಷ ತುಂಬಿ 84 ನೇ ವರ್ಷಕ್ಕೆ ಕಾಲಿಟ್ಟಿವೆ ಎಂದರು.

ಪಾಲಿಟೆಕ್ನಿಕ್ ನಲ್ಲಿ 2026-27 ರಲ್ಲಿ AI  ವಿಭಾಗವನ್ನ ಹೊಸದಾಗಿ ಆರಂಭಿಸಿರುವುದಾಗಿ ತಿಳಿಸಿದ್ದಾರೆ. 

DVS School achieves good academic results

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close