ಮಲ್ಲಿಕಾರ್ಜುನ ಚಲನ ಚಿತ್ರ ಮಂದಿರದ ಎರಡುಗಡೆಯಿದ್ದ ಮಂಡಕ್ಕಿ ಬೋಂಡದ ಅಂಗಡಿಗಳು ಬೇರೆಡೆ ಶಿಫ್ಟ್- The Mandakki Bonda shops shifted on either side of the Mallikarjuna Chalan Chitra Mandir have been relocated

SUDDILIVE || SHIVAMOGGA

ಮಲ್ಲಿಕಾರ್ಜುನ ಚಲನ ಚಿತ್ರ ಮಂದಿರದ ಎರಡುಗಡೆಯಿದ್ದ ಮಂಡಕ್ಕಿ ಬೋಂಡದ ಅಂಗಡಿಗಳು ಬೇರೆಡೆ ಶಿಫ್ಟ್- The Mandakki Bonda shops shifted on either side of the Mallikarjuna Chalan Chitra Mandir have been relocated 




ಮಲ್ಲಿಕಾರ್ಜುನ ಚಲನಚಿತ್ರ ಮಂದಿರದ ಎದುರುಗಡೆ ಫುಟ್ ಪಾತ್ ನಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಮಂಡಕ್ಕಿ, ಬೋಂಡದ ಅಂಗಡಿಯನ್ನ ಬೇರೆಡೆ ಶಿಫ್ಟ್ ಮಾಡಲಾಗಿದೆ.‌

ಶಿವಮೊಗ್ಗ ನಗರದ ಮಲ್ಲಿಕಾರ್ಜುನ ಚಿತ್ರಮಂದಿರದ ಎದುರುಗಡೆ ಸುಮಾರು 45  ವರ್ಷಗಳಿಂದ ಬೋಂಡಾ ಮಂಡಕ್ಕಿ ಕಾರ  ವ್ಯಾಪಾರ ಮಾಡಿಕೊಂಡು, ಪ್ರತಿ ಅಂಗಡಿಯವರಿಗೂ ಅವರದ್ದೇ ಆದ ರುಚಿ ಹಾಗೂ ಇತಿಹಾಸವು ಸಹ ಇದೆ. ಹೀಗಿರುವಾಗ ಸಂಚಾರಿ ಪೊಲೀಸರು ನಗರದಲ್ಲಿ ಹೆಚ್ಚಾಗಿರುವ ವಾಹನ ದಟ್ಟಣೆಯ ಉದ್ದೇಶದಿಂದ ಬೀದಿಬದಿ ವ್ಯಾಪಾರಸ್ಥರಾಗಿರುವ ಇವರುಗಳಿಗೆ ತೆರವುಗೊಳಿಸಲು  ಆದೇಶಿಸಿದ್ದರು, 

ಇದರ ವಿಚಾರವಾಗಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಂತಹ ಹೆಚ್ ಸಿ ಯೋಗೇಶ್ ರವರು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹತ್ತಿರದಲ್ಲೇ ಇರುವ ಐಸಿಐಸಿ ಬ್ಯಾಂಕ್ ನ ಪಕ್ಕದಲ್ಲಿನ ಸರಕಾರಿ ಜಾಗದಲ್ಲಿ ಇವರುಗಳಿಗೆ ವ್ಯಾಪಾರ ಮಾಡಲು ಅನುಕೂಲ ಮಾಡುವಂತೆ  ಸಂಚಾರಿ ಪೊಲೀಸರ ನೇತೃತ್ವದಲ್ಲಿ ಕೆಇಬಿ ಅಧಿಕಾರಿಗಳಿಗೂ ಸೂಚನೆ ನೀಡುವ ಮುಖಾಂತರ ಇವರಿಗೆ ವ್ಯಾಪಾರಕ್ಕೆ ಅನುಕೂಲವಾಗುವಂತೆ ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

 ತದನಂತರ ಮಂಡಕ್ಕಿ ಅಂಗಡಿಗಳಿಗೆ ಭೇಟಿ ನೀಡಿ ವ್ಯಾಪಾರಿಗಳನ್ನು ಮಾತನಾಡಿಸುತ್ತಾ ಮಂಡಕ್ಕಿ ಬೊಂಡ ಸಾರ್ವಜನಿಕರಿಗೆ ತಿನ್ನಲು ನೀಡುವ ಸಂದರ್ಭದಲ್ಲಿ ನ್ಯೂಸ್ ಪೇಪರ್ ಗಳನ್ನು ಬಳಸಬಾರದೆಂದು ಇದರಿಂದ ಆ ಪೇಪರ್ ನಲ್ಲಿರುವ ಕಾರ್ಬನ್ ಗಳು ತಿಣಿಸುಗಳಿಗೆ ಎಣ್ಣೆ ಪದಾರ್ಥಗಳಿಗೆ ಬೇಗ ಆಕರ್ಷಣೆಗೊಂಡು ಈ ರೀತಿ ನ್ಯೂಸ್ ಪೇಪರ್ ನಲ್ಲಿ ಆಹಾರ ತಿನ್ನುವುದರಿಂದ ಆರೋಗ್ಯಕ್ಕೆ ಹಾನಿ  ಉಂಟಾಗುವುದರಿಂದ ಪ್ರತಿ ತಿಂಡಿ ತಿನಿಸು ವ್ಯಾಪಾರಸ್ಥರಿಗೆ ನ್ಯೂಸ್ ಪೇಪರ್ ಗಳನ್ನು ಬಳಸಬಾರದೆಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೂ ಹಾಗೂ ಆರೋಗ್ಯ ಅಧಿಕಾರಿಗಳಿಗೂ ಇದರ ವಿಚಾರವಾಗಿ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರು. 

ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಶಿವಕುಮಾರ್ ರವರು, ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್ ಪಿ ಚಂದ್ರಶೇಖರ್ ರವರು, ಚಿನ್ನಪ್ಪ ರವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಾಧರ್ ರವರು ವಾರ್ಡ್ ಅಧ್ಯಕ್ಷರಾದ ಶಿವಾನಂದ್ ರವರು, ಪವನ್ ರವರು, ಶರತ್ ರವರು, ಮಹಾನಗರ ಪಾಲಿಕೆ ಅಭಿಯಂತಕರರಾದ ಜ್ಯೋತಿರವರು, ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿಗಳಾದ ಪ್ರಭಾಕರ್ ರವರು, ಸಂಚಾರಿ ಪೊಲೀಸ್ ರುತನ ನಿರೀಕ್ಷಕರಾದ ದೇವರಾಜ್ ರವರು, ಸಂಚಾರಿ ಪೊಲೀಸ್ ಅಧಿಕಾರಿಯಾದ ಸ್ವಪ್ನ ರವರು, ವ್ಯಾಪಾರಸ್ಥರು ಸಾರ್ವಜನಿಕರು ಉಪಸ್ಥಿತರಿದ್ದರು.

The Mandakki Bonda shops shifted on either side of the Mallikarjuna Chalan Chitra Mandir have been relocated 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close