ದರ್ಗಾ ಸಮಿತಿಯ ಸುದೀರ್ಘ ಹೋರಾಟಕ್ಕೆ ಜಯ: ಬಾಲಾಜಿ ಹೋಟೆಲ್ ಜಾಗ ಖಾಲಿ, ಚಾವಿ ಹಸ್ತಾಂತರ-Dargah committee wins long fight: Balaji Hotel site vacated, keys handed over

 SUDDILIVE|| SHIVAMOGGA

ದರ್ಗಾ ಸಮಿತಿಯ ಸುದೀರ್ಘ ಹೋರಾಟಕ್ಕೆ ಜಯ: ಬಾಲಾಜಿ ಹೋಟೆಲ್ ಜಾಗ ಖಾಲಿ, ಚಾವಿ ಹಸ್ತಾಂತರ-Dargah committee wins long fight: Balaji Hotel site vacated, keys handed over 
Dargah, committee

ಶಿವಮೊಗ್ಗ, ಜೂನ್ 6: ನಗರದ ಹೃದಯಭಾಗದಲ್ಲಿರುವ ಹಜರತ್ ಶಾ ಅಲೀಮ್ ದೀವಾನ್ ದರ್ಗಾ ಮತ್ತು ಶಾಪಿಂಗ್ ಕಾಂಪ್ಲೆಕ್ಸ್ ಮ್ಯಾನೇಜಿಂಗ್ ಕಮಿಟಿಯ ಸುದೀರ್ಘ ಕಾನೂನು ಹೋರಾಟಕ್ಕೆ ಅಂತಿಮವಾಗಿ ಯಶಸ್ಸು ದೊರೆತಿದೆ.

ದರ್ಗಾಕ್ಕೆ ಸೇರಿದ ಆಸ್ತಿಯಲ್ಲಿ ಹಲವು ವರ್ಷಗಳಿಂದ ಬಾಲಾಜಿ ಹೋಟೆಲ್ ಕಾರ್ಯನಿರ್ವಹಿಸುತ್ತಿದ್ದು, ಈ ಜಾಗ ದರ್ಗಾದ ಸ್ವತ್ತು ಎಂಬುದಾಗಿ ಸಮಿತಿ ನಿರಂತರವಾಗಿ ಕಾನೂನು ಹೋರಾಟ ನಡೆಸುತ್ತಾ ಬಂದಿತ್ತು. ದಶಕಗಳ ಕಾಲ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿದ್ದ ಈ ವಿವಾದಾತ್ಮಕ ಆಸ್ತಿಯ ಪ್ರಕರಣ ಇದೀಗ ದರ್ಗಾ ಸಮಿತಿಯ ಪರವಾಗಿ ಅಂತ್ಯಗೊಂಡಿದೆ.

ಶನಿವಾರ ಹೋಟೆಲ್ ಮಾಲೀಕರು ಸ್ವಯಂಪ್ರೇರಿತರಾಗಿ ಜಾಗವನ್ನು ಖಾಲಿ ಮಾಡಿ, ಅದರ ಚಾವಿಯನ್ನು ಹಜರತ್ ಸೈಯದ್ ಶಾ ಅಲೀಮ್ ದೀವಾನ್ ದರ್ಗಾ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಈ ಬೆಳವಣಿಗೆಯಿಂದಾಗಿ ಶತಮಾನಗಳ ಇತಿಹಾಸ ಹೊಂದಿರುವ ದರ್ಗಾದ ಪವಿತ್ರ ಆಸ್ತಿ ಮತ್ತೆ ದರ್ಗಾ ಸಮಿತಿಯ ವಶಕ್ಕೆ ಬಂದಿದ್ದು, ಸಮಿತಿಯ ಸದಸ್ಯರು ಹಾಗೂ ಭಕ್ತರಲ್ಲಿ ಸಂತಸ ಮೂಡಿಸಿದೆ.

ದರ್ಗಾ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಸಂತೋಷ ವ್ಯಕ್ತಪಡಿಸಿ, ದೀರ್ಘಕಾಲದ ಕಾನೂನು ಹೋರಾಟಕ್ಕೆ ನ್ಯಾಯ ದೊರೆತಿರುವುದಾಗಿ ತಿಳಿಸಿದ್ದಾರೆ. ಈ ಆಸ್ತಿಯನ್ನು ದರ್ಗಾದ ಅಭಿವೃದ್ಧಿ ಹಾಗೂ ಸಾರ್ವಜನಿಕ ಉಪಯೋಗಕ್ಕಾಗಿ ಬಳಸುವ ಕುರಿತು ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.

Dargah committee wins long fight: Balaji Hotel site vacated, keys handed over

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close