ವೈದ್ಯ ಡಾ. ಪೃಥ್ವಿ ಮನೆಯಲ್ಲಿ 24 ಗಂಟೆಗಳ ಅಖಂಡ -24-Hour Akhanda Bhajane (Continuous Devotional Singing) Held at Dr. Prithvi's Residence

 SUDDILIVE || SHIVAMOGGA

ವೈದ್ಯ ಡಾ. ಪೃಥ್ವಿ ಮನೆಯಲ್ಲಿ 24 ಗಂಟೆಗಳ ಅಖಂಡ -24-Hour Akhanda Bhajane (Continuous Devotional Singing) Held at Dr. Prithvi's Residence

Akhanda, bhajane

ಶಿವಮೊಗ್ಗ, ಜೂನ್ 6: ಮೆಟ್ರೋ ಆಸ್ಪತ್ರೆಯ ವೈದ್ಯ ಡಾ. ಪೃಥ್ವಿ ಅವರ ಮನೆಯಲ್ಲಿ ಶನಿವಾರ ಬೆಳಿಗ್ಗೆಯಿಂದ 24 ಗಂಟೆಗಳ ಅಖಂಡ ಭಜನಾ ಕಾರ್ಯಕ್ರಮ ಆರಂಭಗೊಂಡಿದೆ.

ಗೋಪಾಳದ ಗುಡ್ ಲಕ್ ವೃತ್ತದಲ್ಲಿರುವ ಲಗಾನ್ ಕಲ್ಯಾಣ ಮಂದಿರದ ಓಂ ಸಾಯಿ ರಾಮ್ ಮನೆಯಲ್ಲಿ ಬೆಳಿಗ್ಗೆ 6 ಗಂಟೆಗೆ ಆರಂಭವಾದ ಭಜನೆ, ಭಾನುವಾರ ಬೆಳಿಗ್ಗೆ 6 ಗಂಟೆಯವರೆಗೆ ನಿರಂತರವಾಗಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಒಟ್ಟು 17 ಭಜನಾ ಮಂಡಳಿಗಳು ಭಾಗವಹಿಸುತ್ತಿದ್ದು, ಇದುವರೆಗೆ 12 ಭಜನಾ ಮಂಡಳಿಗಳು ಭಜನೆ ನಡೆಸಿ ಮುಗಿಸಿವೆ. ಉಳಿದ ಐದು ಭಜನಾ ಮಂಡಳಿಗಳು ರಾತ್ರಿ ಮತ್ತು ಮುಂಜಾನೆ ವೇಳೆಯಲ್ಲಿ ಭಜನಾ ಸೇವೆ ಸಲ್ಲಿಸಲಿವೆ.

ಭಕ್ತರ ಅನುಕೂಲಕ್ಕಾಗಿ ವೈದ್ಯರ ಕುಟುಂಬದ ವತಿಯಿಂದ ಸಂಪ್ರದಾಯಬದ್ಧವಾಗಿ ವ್ಯವಸ್ಥೆ ಮಾಡಲಾಗಿದ್ದು, ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಲ್ಪಿಸಲಾಗಿದೆ.

ಈ ಕುರಿತು ಮಾತನಾಡಿದ ಡಾ. ಪೃಥ್ವಿ, “ಅಖಂಡ ಭಜನಾ ಕಾರ್ಯಕ್ರಮವನ್ನು ಇತ್ತೀಚೆಗೆ ಆರಂಭಿಸಿರುವುದಲ್ಲ. ಕಳೆದ 15 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಪ್ರತಿವರ್ಷ ಜೂನ್ ತಿಂಗಳಿನಲ್ಲಿ ಒಂದು ದಿನಾಂಕ ನಿಗದಿಪಡಿಸಿ 24 ಗಂಟೆಗಳ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ” ಎಂದು ತಿಳಿಸಿದರು.

ಭಜನಾ ಕಾರ್ಯಕ್ರಮದಲ್ಲಿ ಗಣ್ಯವ್ಯಕ್ತಿಗಳು, ರಾಜಕೀಯದವರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಿ ಸಂಭ್ರಮದಲ್ಲಿ ತೊಡಗಿದ್ದಾರೆ.

Hour Akhanda Bhajane (Continuous Devotional Singing) Held at Dr. Prithvi's Residence


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close