SUDDILIVE || SHIVAMOGGA
ಜುಲೈ 5ರಂದು ಶಿವಮೊಗ್ಗದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ-Power outage in many areas of Shivamogga on July 5th
ಶಿವಮೊಗ್ಗ, ಜುಲೈ 03: ಶಿವಮೊಗ್ಗ ನಗರ ಮೆಸ್ಕಾಂ ಉಪವಿಭಾಗ-2, ಘಟಕ-6ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಜುಲೈ 05ರಂದು ಬೆಳಗ್ಗೆ 09 ರಿಂದ ಸಂಜೆ 4 ಗಂಟೆಯವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳೆಂದರೆ ಗೋಪಿಶೆಟ್ಟಿಕೊಪ್ಪ, ಸಿದ್ದೇಶ್ವರ ಸರ್ಕಲ್, ಚಾಲುಕ್ಯನಗರ, ಮಂಜಪ್ಪ ಬಸಪ್ಪ ಲೇಔಟ್, ಗದ್ದೆಮನೆ ಲೇಔಟ್, ಭರತ್ ಎಂಟರ್‌ಪ್ರೈಸಸ್, ಆಶ್ರಯ ಬಡಾವಣೆ, ಆನಂದಗಿರಿ ಬಡಾವಣೆ, ಮಲ್ಲಿಕಾರ್ಜುನ ಬಡಾವಣೆ, ವಿನಾಯಕ ಸರ್ಕಲ್, ಜಿ.ಎಸ್. ಕಾಸ್ಟಿಂಗ್, ಸೋಮಣ್ಣ ಫ್ಯಾಕ್ಟರಿ, ಸಲೀಮ್ ಫ್ಯಾಕ್ಟರಿ, 100 ಅಡಿ ರಸ್ತೆ, ಕಾಮತ್ ಲೇಔಟ್, ಮೇಲಿನ ತುಂಗಾನಗರ, ಇಲಿಯಾಜ್ ನಗರ ಚಾನಲ್ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿರುವುದರಿಂದ, ಸಂಬಂಧಿತ ಪ್ರದೇಶಗಳ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.
