SUDDILIVE || SHIVAMOGGA
ಆಟೋ ಕಾಂಪ್ಲೆಕ್ಸ್‌ನ ಗ್ಯಾರೇಜ್‌ನಲ್ಲಿ ಲಕ್ಷಾಂತರ ರೂ. ನಗದು, ಬ್ಯಾಟರಿ ಕಳವು-Lakhs of rupees in cash, batteries stolen from garage of auto complex
ಶಿವಮೊಗ್ಗ: ನಗರದ ಆಟೋ ಕಾಂಪ್ಲೆಕ್ಸ್‌ನಲ್ಲಿರುವ ‘ಇಂಡಿಯನ್ ಕಾರ್ ಗ್ಯಾರೇಜ್’ನಲ್ಲಿ ತಡರಾತ್ರಿ ಕಳ್ಳತನ ನಡೆದಿದ್ದು, ಗ್ಯಾರೇಜ್‌ನಲ್ಲಿದ್ದ ₹3.01 ಲಕ್ಷ ನಗದು ಹಾಗೂ ಬ್ಯಾಟರಿಯನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ಕಾರುಗಳ ರಿಪೇರಿ ಕೆಲಸಕ್ಕಾಗಿ ಗ್ಯಾರೇಜ್ ಮಾಲೀಕರು ಇಟ್ಟಿದ್ದ ₹3.01 ಲಕ್ಷ ನಗದು ಹಣವನ್ನು ಕಳ್ಳರು ಕದ್ದೊಯ್ದಿದ್ದಾರೆ. ಜೊತೆಗೆ ಗ್ಯಾರೇಜ್‌ನಲ್ಲಿದ್ದ ಬ್ಯಾಟರಿಯನ್ನೂ ಕಳವು ಮಾಡಲಾಗಿದೆ.
ತಡರಾತ್ರಿ ಗ್ಯಾರೇಜ್‌ಗೆ ಬಂದ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಬಾಗಿಲು ಮುರಿದು ಒಳನುಗ್ಗಿ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಕಳ್ಳತನದ ವೇಳೆ ಮತ್ತೊಬ್ಬ ವ್ಯಕ್ತಿ ಬೈಕ್‌ನಲ್ಲಿ ಗ್ಯಾರೇಜ್ ಹೊರಭಾಗದಲ್ಲಿ ನಿಂತು ಸಹಕರಿಸಿರುವುದು ಪಕ್ಕದ ಗ್ಯಾರೇಜ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಇಬ್ಬರು ಮುಸುಕುಧಾರಿಗಳನ್ನು ಗ್ಯಾರೇಜ್ ಬಳಿ ಇಳಿಸಿ ಮತ್ತೊಬ್ಬ ವ್ಯಕ್ತಿ ಬೈಕ್‌ನಲ್ಲಿ ತೆರಳಿರುವುದು ಕಂಡುಬಂದಿದೆ. ಕಳ್ಳತನ ನಡೆಯುತ್ತಿದ್ದ ಸಂದರ್ಭದಲ್ಲಿ ಹೊರಗಡೆ ನಿಂತಿದ್ದ ಬೈಕ್ ಸವಾರ ಸಿಗ್ನಲ್ ನೀಡುತ್ತಿರುವ ದೃಶ್ಯವೂ ದಾಖಲಾಗಿದೆ.
ಗ್ಯಾರೇಜ್ ಮಾಹಿತಿ ತಿಳಿದವರ ಕೈವಾಡದ ಶಂಕೆ
ಗ್ಯಾರೇಜ್‌ನ ಒಳಗಿನ ವ್ಯವಸ್ಥೆ ಹಾಗೂ ಹಣ ಇರುವ ಬಗ್ಗೆ ಮಾಹಿತಿ ಹೊಂದಿದ್ದವರೇ ಕೃತ್ಯದಲ್ಲಿ ಭಾಗಿಯಾಗಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ. ಕಳ್ಳತನದ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳ ಆಧಾರದ ಮೇಲೆ ಕಳ್ಳರ ಗುರುತು ಹಾಗೂ ಕೃತ್ಯಕ್ಕೆ ಸಂಬಂಧಿಸಿದ ಇತರ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
