2028ರೊಳಗೆ ಡಿಸಿಸಿ ಬ್ಯಾಂಕ್ ಅಮೃತ ಭವನ ನಿರ್ಮಾಣ ಪೂರ್ಣ: ಆರ್.ಎಂ. ಮಂಜುನಾಥ ಗೌಡ-Construction of DCC Bank Amrutha Bhavan to be completed by 2028: R.M. Manjunatha Gowda

 SUDDILIVE || SHIVAMOGGA

2028ರೊಳಗೆ ಡಿಸಿಸಿ ಬ್ಯಾಂಕ್ ಅಮೃತ ಭವನ ನಿರ್ಮಾಣ ಪೂರ್ಣ: ಆರ್.ಎಂ. ಮಂಜುನಾಥ ಗೌಡ-Construction of DCC Bank Amrutha Bhavan to be completed by 2028: R.M. Manjunatha Gowda


   

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ನ 75ನೇ ವರ್ಷದ ವಜ್ರ ಮಹೋತ್ಸವದ ಅಂಗವಾಗಿ ಬ್ಯಾಂಕ್ ಆವರಣದಲ್ಲಿ ‘ಅಮೃತ ಭವನ’ ನಿರ್ಮಾಣಕ್ಕೆ ಶುಕ್ರವಾರ ಶಂಕುಸ್ಥಾಪನೆ ಹಾಗೂ ಭೂಮಿಪೂಜೆ ನೆರವೇರಿಸಲಾಯಿತು.

ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, 2028ರಲ್ಲಿ ಬ್ಯಾಂಕ್‌ನ 75ನೇ ವರ್ಷದ ವಜ್ರ ಮಹೋತ್ಸವ ಆಚರಿಸಲಾಗುವುದು. ಅದಕ್ಕೂ ಮುನ್ನ, 2028ರ ಮಾರ್ಚ್ ಒಳಗಾಗಿ ಅಮೃತ ಭವನದ ನಿರ್ಮಾಣ ಪೂರ್ಣಗೊಳಿಸಿ ಉದ್ಘಾಟಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಸಹಕಾರ ಕ್ಷೇತ್ರದಲ್ಲಿ ಕಾರ್ಪೊರೇಟ್ ಮಾದರಿಯ ಆಡಳಿತ ವ್ಯವಸ್ಥೆ ತರಲು ಬ್ಯಾಂಕ್ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದ್ದು, ಸಂಪೂರ್ಣ ಗಣಕೀಕೃತ ವ್ಯವಸ್ಥೆ ರೂಪಿಸಲಾಗುತ್ತಿದೆ. 2028ರ ಮಾರ್ಚ್ ವೇಳೆಗೆ ಬ್ಯಾಂಕ್‌ನ 50 ಶಾಖೆಗಳನ್ನು ತಲುಪುವ ಗುರಿಯನ್ನೂ ಹೊಂದಲಾಗಿದೆ ಎಂದು ಹೇಳಿದರು.

ಪ್ರಸ್ತುತ ಬ್ಯಾಂಕ್‌ನಲ್ಲಿ ಸುಮಾರು 3.5 ಲಕ್ಷ ಗ್ರಾಹಕರಿದ್ದು, 2028ರ ವೇಳೆಗೆ ಈ ಸಂಖ್ಯೆ 5 ಲಕ್ಷಕ್ಕೆ ತಲುಪುವ ನಿರೀಕ್ಷೆಯಿದೆ. ಬ್ಯಾಂಕಿಂಗ್ ಸೇವೆಗಳನ್ನು ಹೆಚ್ಚಿನ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ATM ಸೇವೆಯ ಜೊತೆಗೆ UPI ಹಾಗೂ QR ಕೋಡ್ ಆಧಾರಿತ ನಗದುರಹಿತ ವ್ಯವಹಾರ ವ್ಯವಸ್ಥೆಗಳನ್ನು ವಿಸ್ತರಿಸಲಾಗುವುದು ಎಂದರು.

ವಿಶೇಷವಾಗಿ ಕೃಷಿ ಕ್ಷೇತ್ರದವರು ಹಾಗೂ ತರಕಾರಿ ವ್ಯಾಪಾರಸ್ಥರಿಗೆ QR ಕೋಡ್ ವ್ಯವಸ್ಥೆ ಒದಗಿಸುವ ಮೂಲಕ ನಗದುರಹಿತ ವಹಿವಾಟಿಗೆ ಉತ್ತೇಜನ ನೀಡಲಾಗುವುದು. UPI ಮತ್ತು PhonePe ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಬ್ಯಾಂಕ್ ಸಜ್ಜಾಗುತ್ತಿದೆ ಎಂದು ಆರ್.ಎಂ. ಮಂಜುನಾಥ ಗೌಡ ತಿಳಿಸಿದರು.

ಅಮೃತ ಭವನ ನಿರ್ಮಾಣಕ್ಕೆ ಅಂದಾಜು ₹5 ಕೋಟಿ ವೆಚ್ಚವಾಗಬಹುದು. ಕಾಮಗಾರಿ ಸಂದರ್ಭದಲ್ಲಿ ವೆಚ್ಚದಲ್ಲಿ ಏರಿಳಿತವಾಗುವ ಸಾಧ್ಯತೆಯೂ ಇದೆ ಎಂದು ಅವರು ಹೇಳಿದರು.

2028ರ ಮಾರ್ಚ್ ಒಳಗಾಗಿ ಅಮೃತ ಭವನದ ಕಾಮಗಾರಿ ಪೂರ್ಣಗೊಳಿಸಿ ಕಾರ್ಯಕ್ರಮ ನಡೆಸುವ ಗುರಿ ಹೊಂದಲಾಗಿದೆ ಎಂದು ಆರ್.ಎಂ. ಮಂಜುನಾಥ ಗೌಡ ಸ್ಪಷ್ಟಪಡಿಸಿದರು.

Construction of DCC Bank Amrutha Bhavan to be completed by 2028: R.M. Manjunatha Gowda   


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close